ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 1,190 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 18 ಜನ ಮೃತಪಟ್ಟಿದ್ದಾರೆ.
ಗಣಿಜಿಲ್ಲೆಗಳಲ್ಲಿ 1,190 ಜನರಿಗೆ ಕೊರೊನಾ, 1,994 ಮಂದಿ ಗುಣಮುಖ - ಬಳ್ಳಾರಿ ಕೋವಿಡ್ -19 ಲೇಟೆಸ್ಟ್ ನ್ಯೂಸ್
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 85,930 ಕ್ಕೆ ಏರಿಕೆಯಾಗಿದ್ದು, ನಿನ್ನೆ 1,994 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ 1,190 ಜನರಿಗೆ ಕೊರೊನಾ, 1,994 ಮಂದಿ ಗುಣಮುಖ
ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 85,930ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 1,223 ತಲುಪಿದೆ. ನಿನ್ನೆ 1,994 ಜನರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇದುವರೆಗೆ 68,677 ಮಂದಿ ಚೇತರಿಕೆ ಕಂಡಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 16,030 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಬಳ್ಳಾರಿ- 425, ಸಂಡೂರು- 159, ಸಿರುಗುಪ್ಪ- 48, ಹೊಸಪೇಟೆ- 180, ಎಚ್.ಬಿ.ಹಳ್ಳಿ- 77, ಕೂಡ್ಲಿಗಿ - 87, ಹರಪನಹಳ್ಳಿ- 113, ಹಡಗಲಿ- 100 ಮತ್ತು ಹೊರ ರಾಜ್ಯದಿಂದ 1 ಪ್ರಕರಣ ವರದಿಯಾಗಿದೆ.