ಬಳ್ಳಾರಿ: ಮನೆಯಿಂದ ಹೊರಗೆ ಬರಬೇಡಿ ಎಂದು ಸರ್ಕಾರ ಹೇಳಿದ್ದರೂ ಅದಕ್ಕೆ ಕ್ಯಾರೆ ಎನ್ನದೆ ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಕೊರೊನಾ ಲಾಕ್ ಡೌನ್: ರಸ್ತೆಗಿಳಿದ ಬಳ್ಳಾರಿ ಜನರಿಗೆ ಲಾಠಿ ರುಚಿ ತೋರಿಸಿದ ಖಾಕಿ - ಲಾಠಿ
ಕೊರೊನಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಇಡೀ ದೇಶಕ್ಕೆ ಲಾಕ್ ಡೌನ್ ಘೋಷಿಸಿದ್ದರೂ ಮನೆಯಲ್ಲಿರದೇ ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗುತ್ತಿದ್ದವರಿಗೆ ಪೊಲೀಸರು ಲಾಠಿ ಬಿಸಿ ಮುಟ್ಟಿಸಿದ್ದಾರೆ.
Bellary
ಕೊರೊನಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಇಡೀ ದೇಶಕ್ಕೆ ಲಾಕ್ ಡೌನ್ ಘೋಷಿಸಿದ್ದರೂ ಮನೆಯಲ್ಲಿ ಇರದೇ ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗುತ್ತಿದ್ದವರಿಗೆ ಪೊಲೀಸರು ಲಾಠಿ ಬಿಸಿ ಮುಟ್ಟಿಸಿದ್ದಾರೆ.
ಬಳ್ಳಾರಿ ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ , ಕೌಲ್ ಬಜಾರ್, ಸುಧಾ ಕ್ರಾಸ್ ಒಂದನೇ ರೈಲ್ವೆ ಮತ್ತು ಎರಡನೇ ರೈಲ್ವೆ ಗೇಟ್ ರಾಮಾಂಜನೇಯ ನಗರ, ಬೆಳಗಲ್ ಕ್ರಾಸ್ ಪ್ರದೇಶದಲ್ಲಿ ಕಾರಣವಿಲ್ಲದೇ ತಿರುಗಾಡುತ್ತಿದ್ದವರಿಗೆ ಪೊಲೀಸರು ಲಾಠಿ ಏಟು ಕೊಟ್ಟಿದ್ದಾರೆ.