ಬಳ್ಳಾರಿ: ಕೌಲ್ ಬಜಾರ್ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿರುವುದರಿಂದ ಈ ಪ್ರದೇಶವನ್ನು ಸಂಪೂರ್ಣವಾಗಿ ಕಂಟೈನ್ಮೆಂಟ್ ಝೋನ್ (ನಿರ್ಬಂಧಿತ ವಲಯ) ಮಾಡಲಾಗಿದೆ.
ಬಳ್ಳಾರಿ ಕೌಲ್ ಬಜಾರ್ ನಿರ್ಬಂಧಿತ ವಲಯ: ಓಡಾಡಲು ಸಾರ್ವಜನಿಕರ ಪರದಾಟ - bellary latest news
ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದ ಕಾರಣ ಕೌಲ್ ಬಜಾರ್ ಪ್ರದೇಶದ ಮೊದಲನೇ ರೈಲ್ವೆ ಗೇಟ್ ಹತ್ತಿರದ ಪ್ಲೈ ಓವರ್ ರಸ್ತೆ ಹಾಗೂ ಜಿಲ್ಲಾ ಕ್ರೀಡಾಂಗಣ ರಸ್ತೆಯನ್ನು ಬೊಂಬುಗಳನ್ನು ಕಟ್ಟಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಬಳ್ಳಾರಿ ಕೌಲ ಬಜಾರ್ ಕಂಟೈನ್ಮೆಂಟ್ ಝೋನ್
ನಿನ್ನೆ ಈ ಪ್ರದೇಶದ ಮೊದಲನೇ ರೈಲ್ವೆ ಗೇಟ್ ಹತ್ತಿರದ ಫ್ಲೈ ಓವರ್ ರಸ್ತೆ ಹಾಗೂ ಜಿಲ್ಲಾ ಕ್ರೀಡಾಂಗಣ ರಸ್ತೆಯನ್ನು ಬೊಂಬುಗಳನ್ನು ಕಟ್ಟಿ ಬಂದ್ ಮಾಡಲಾಗಿತ್ತು.
ಆದರೆ, ಇದನ್ನು ಲೆಕ್ಕಿಸದ ಸಾರ್ವಜನಿಕರು ಸಂಚರಿಸಲು ಬೊಂಬು ಮುರಿಯುವ ಹಂತಕ್ಕೂ ತಲುಪಿದ್ದರು. ಕೆಲ ಸಾರ್ವಜನಿಕರು ಮೋತಿ, ಮೊದಲನೇ ರೈಲ್ವೆ ಗೇಟ್, ಎರಡನೇ ರೈಲ್ವೆ ಗೇಟ್ ಹತ್ತಿರದಿಂದ ಕೌಲ್ ಬಜಾರ್ ಸೇರಿಕೊಂಡರು. ಈ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.