ಬಳ್ಳಾರಿ: ಕಲ್ಲಿದ್ದಲು ಕೊರತೆಯಿಂದಾಗಿ ಜಿಲ್ಲೆಯ ಕುಡಿತಿನಿ ಸಮೀಪವಿರುವ ಬಿಟಿಪಿಎಸ್ (ಶಾಖೋತ್ಪನ್ನ ವಿದ್ಯುತ್ ಕೇಂದ್ರ) ಸ್ಥಗಿತವಾಗುವ ಆತಂಕ ಎದುರಾಗಿದೆ.
ಕಲ್ಲಿದ್ದಲು ಕೊರತೆ: ನಾಳೆಯಿಂದ ಕುಡಿತಿನಿ ಬಿಟಿಪಿಎಸ್ ಸ್ಥಗಿತ ಸಾಧ್ಯತೆ - BTPS
ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುಡಿತಿನಿ ಸಮೀಪವಿರುವ ಬಿಟಿಪಿಎಸ್ ಕಾರ್ಯ ನಾಳೆಯಿಂದ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಗಣಿ ಪ್ರದೇಶದಲ್ಲಿ ಮಳೆ, ನೆರೆ ಹಾಗೂ ರೈಲು ಸಂಚಾರದ ಸಮಸ್ಯೆಯಿಂದಾಗಿ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬಿಟಿಪಿಎಸ್ಗೆ ಆಂಧ್ರದ ಸಿಂಗರೇಣಿ, ಮಹನಂದಿ, ಜೊತೆಗೆ ಮಹಾರಾಷ್ಟ್ರದಿಂದಲೂ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಆದ್ರೆ ಇದೀಗ ಎಲ್ಲಾ ಕಡೆ ಕಲ್ಲಿದ್ದಲು ರವಾನೆ ಬಂದ್ ಆಗಿದ್ದು ಸಮಸ್ಯೆ ಉದ್ಭವಿಸಿದೆ.
1,700 ಮೆಗಾ ವ್ಯಾಟ್ ಸಾಮರ್ಥ್ಯದ ಬಿಟಿಪಿಎಸ್ಗೆ ದಿನಕ್ಕೆ 25 ಸಾವಿರ ಟನ್ ಕಲ್ಲಿದ್ದಲು ಬೇಕು. ಆದ್ರೆ ಅಧಿಕಾರಿಗಳು ಕಳೆದ ನಾಲ್ಕು ದಿನಗಳ ಹಿಂದೆ ಬಿಟಿಪಿಎಸ್ನಲ್ಲಿ ಕೇವಲ 15 ಸಾವಿರ ಟನ್ ಸ್ಟಾಕ್ ಇದೆ ಎಂದಿದ್ದರು. ಜೊತೆಗೆ ಇರುವ ಮೂರು ಘಟಕಗಳಲ್ಲಿ ಎರಡು ಘಟಕ ಬಂದ್ ಮಾಡಿದ್ರು. ಇಂದು ಒಂದು ಘಟಕ ಕಾರ್ಯ ನಿರ್ವಹಿಸುತ್ತಿದ್ದು, ನಾಳೆಯಿಂದ ಬಿಟಿಪಿಎಸ್ ಸಂಫೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.