ಬಳ್ಳಾರಿ:ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ನೂತನ ಜಿಲ್ಲೆ ರಚನೆ ಮಾಡಿರೋದನ್ನ ವಿರೋಧಿಸಿ ವಿವಿಧ ಸಂಘಟನೆಗಳ ಮುಖಂಡರು ಬಳ್ಳಾರಿ ಬಂದ್ ಹಮ್ಮಿಕೊಂಡಿರುವ ಹಿನ್ನೆಲೆ, ಜಿಲ್ಲಾ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನಚ್ಚೆರಿಕಾ ಕ್ರಮ ಕೈಗೊಂಡಿದೆ.
ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ, ವಿವಿಧ ಸಂಘಟನೆಗಳು, ರೈತ ಪರ ಸಂಘಟನೆಗಳು, ಕನ್ನಡ ಪರ ಸಂಘಟನಾಕಾರರು, ವಿವಿಧ ರಾಜಕೀಯ ಮುಖಂಡರು ಮತ್ತು ವಿವಿಧ ಸಾಮಾಜಿಕ ಹೋರಾಟ ಸಂಘಟನೆಗಳ ಮುಖಂಡರು ನ.26ರಂದು ಬಳ್ಳಾರಿ ಬಂದ್ ಹಮ್ಮಿಕೊಂಡಿರುವ ಹಿನ್ನೆಲೆ, ಜಿಲ್ಲಾ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನಚ್ಚೆರಿಕಾ ಕ್ರಮಗಳು ಮತ್ತು ಬಂದೋಬಸ್ತ್ ಕೈಗೊಂಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಸ್ಪಿ ಸೈದುಲು ಅಡಾವತ್ ಅವರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ 3 ಜನ ಡಿಎಸ್‍ಪಿ, 10 ಸಿಪಿಐ/ಪಿಐ,18 ಪಿಎಸ್‍ಐ, 40 ಎಎಸ್‌ಐ, 200 ಹೆಚ್‌ಸಿ/ಪಿಸಿ, 3 ಡಿಎಆರ್ ತುಕಡಿ ನೇಮಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.