ಬಳ್ಳಾರಿ:ಗಣಿನಾಡಿನ ನೂರಾರು ಬಿಡಾಡಿ ದನಗಳ ಹಸಿವು ನೀಗಿಸಲು ನಗರ ಉಪ ವಿಭಾಗದ ಡಿವೈಎಸ್ಪಿ ರಾಮರಾಮ್ ಮುಂದಾಗಿದ್ದಾರೆ.
ಬಿಡಾಡಿ ದನಗಳಿಗೆ ಮೇವು ಪೂರೈಕೆ... ಮಾನವೀಯತೆ ಮೆರೆದ ಬಳ್ಳಾರಿ ಡಿವೈಎಸ್ಪಿ
ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಡಾಡಿ ದನಗಳಿಗೆ ಮೇವು ಪೂರೈಸುವ ಮೂಲಕ ಬಳ್ಳಾರಿ ಡಿವೈಎಸ್ಪಿ ರಾಮರಾವ್ ಅವರು ಮಾನವೀಯತೆ ಮೆರೆದಿದ್ದಾರೆ. ಕರ್ತವ್ಯದ ಮಧ್ಯೆ ಬಿಡಾಡಿ ದನಗಳ ಕಷ್ಟಕ್ಕೆ ಸ್ಪಂದಿಸಿರುವ ಡಿವೈಎಸ್ಪಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಿಡಾಡಿ ದನಗಳಿಗೆ ಮೇವು ಪೂರೈಸಿದ ಬಳ್ಳಾರಿ ನಗರದ ಡಿವೈಎಸ್ಪಿ!
ನಗರದ ನಾನಾ ಕಡೆಗಳಲ್ಲಿ ನೆಲೆಸಿರುವ ಬಿಡಾಡಿ ದನಗಳತ್ತ ತೆರಳಿದ ಡಿವೈಎಸ್ಪಿ ರಾಮರಾಮ್ ಸ್ವತಃ ತಾವೇ ಮೇವು ಹಾಕಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಡಾಡಿ ದನಗಳಿಗೆ ಮೇವು ಪೂರೈಕೆಯ ಸಂಕಷ್ಟವನ್ನರಿತ ಡಿವೈಎಸ್ಪಿ ರಾಮರಾವ್ ಅವರು, ನಾನಾ ಕಡೆಗಳಿಗೆ ತೆರಳಿ ಮೇವು ಪೂರೈಸಿದ್ದಾರೆ.
ಎನ್ಜಿಕೆ ಕಲ್ಯಾಣ ಮಂಟಪದ ಮಾಲೀಕ ಸಿ.ಬಿ. ಗೋಪಾಲರೆಡ್ಡಿ, ಮುಖಂಡರಾದ ಅನಿಲ್ ಚಿರಾನಿಯ, ಎಸ್ಬಿಜೆಎಸ್ನ ಸಿ.ಯಲ್ಲಾರೆಡ್ಡಿ, ಅಶೋಕ, ಶಿವಕುಮಾರ, ಗುತ್ತಿಗೆದಾರ ಪಿ. ಯರಿ ಬಸವನಗೌಡ ಅವರು ಡಿವೈಎಸ್ಪಿ ರಾಮರಾವ್ ಅವರಿಗೆ ಸಾಥ್ ನೀಡಿದ್ರು.