ಕರ್ನಾಟಕ

karnataka

ETV Bharat / state

ಲೆಕ್ಕ ಪರಿಶೋಧಕರ ಫೋಟೋ ಹಾಕಿ ವಂಚನೆಗೆ ಯತ್ನ: ವಾಟ್ಸ್​ಆ್ಯಪ್ ಡಿಪಿ ನೋಡಿ ಮೋಸ ಹೋಗಬೇಡಿ! - bank account

ವಂಚಕನೋರ್ವ ತನ್ನ ವಾಟ್ಸ್​ಆ್ಯಪ್ ಡಿಪಿಗೆ ಬಳ್ಳಾರಿ ನಗರದ ಹಿರಿಯ ಲೆಕ್ಕ ಪರಿಶೋಧಕ ಎಸ್.ಪನ್ನರಾಜ್ ಅವರ ಫೋಟೋ ಹಾಕಿ ಮತ್ತೊಬ್ಬ ಲೆಕ್ಕ ಪರಿಶೋಧಕರಿಗೆ ವಾಟ್ಸ್​ಆ್ಯಪ್ ಕರೆ ಮಾಡುವುದರ ಜೊತೆಗೆ ಸಂದೇಶಗಳನ್ನು ಕಳುಹಿಸಿದ್ದಾನೆ. ಯುಪಿಐ, ಪೇಟಿಎಂ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸುತ್ತೀರಾ ಎಂದು ಕೇಳಿ ವಂಚಿಸಲು ಯತ್ನಿಸಿದ್ದಾನೆ.

ವಾಟ್ಸ್​ಆ್ಯಪ್ ಡಿಪಿ
ವಾಟ್ಸ್​ಆ್ಯಪ್ ಡಿಪಿ

By

Published : May 29, 2020, 11:41 AM IST

ಬಳ್ಳಾರಿ: ವಾಟ್ಸ್​ಆ್ಯಪ್ ಡಿಪಿಗೆ ಪರಿಚಿತರ ಫೋಟೋ ಹಾಕಿ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ ಪಡೆದು ವಂಚಿಸಲು ಯತ್ನಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ವಂಚಕನೋರ್ವ ತನ್ನ ವಾಟ್ಸ್​ಆ್ಯಪ್ ಡಿಪಿಗೆ ಬಳ್ಳಾರಿ ನಗರದ ಹಿರಿಯ ಲೆಕ್ಕ ಪರಿಶೋಧಕ ಎಸ್.ಪನ್ನರಾಜ್ ಅವರ ಫೋಟೋ ಹಾಕಿ ಮತ್ತೊಬ್ಬ ಲೆಕ್ಕ ಪರಿಶೋಧಕರಿಗೆ ವಾಟ್ಸ್​ಆ್ಯಪ್ ಕರೆ ಮಾಡುವುದರ ಜೊತೆಗೆ ಸಂದೇಶಗಳನ್ನು ಕಳುಹಿಸಿದ್ದಾನೆ. ಯುಪಿಐ, ಪೇಟಿಎಂ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸುತ್ತೀರಾ ಎಂದು ಕೇಳಿದ್ದಾನೆ. ಈ ಬಗ್ಗೆ ಎಚ್ಚೆತ್ತುಕೊಂಡ ಲೆಕ್ಕ ಪರಿಶೋಧಕ, ನಾನು ನಿಮ್ಮ ಇನ್ನೊಂದು ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಲೆಕ್ಕ ಪರಿಶೋಧಕರು ವಾಟ್ಸ್​ಆ್ಯಪ್ ಸಂದೇಶ ಹಾಗೂ ಕರೆ ಬಂದಿರುವ ಬಗ್ಗೆ ಹಿರಿಯ ಲೆಕ್ಕ ಪರಿಶೋಧಕ ಎಸ್.ಪನ್ನರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ.

ವಾಟ್ಸ್​ಆ್ಯಪ್ ನಲ್ಲಿ ನಡೆಸಿದಿರುವ ಸಂಭಾಷನೆ

ಈ ಕುರಿತು ಪ್ರತಿಕ್ರಿಯಿಸಿದ ಎಸ್.ಪನ್ನರಾಜ್, ವಾಟ್ಸ್​ಆ್ಯಪ್ ಕರೆ ಹಾಗೂ ಸಂದೇಶ ಬಂದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಅದೇ ಸಂಖ್ಯೆಯಿಂದ ಬೇರೆ ಲೆಕ್ಕ ಪರಿಶೋಧಕರನ್ನೂ ವಂಚಿಸುವ ಯತ್ನ ಮಾಡಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವೆ. ಶೀಘ್ರವಾಗಿ ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details