ಬಳ್ಳಾರಿ:ವಿವಿಧ ಇಲಾಖೆಗಳನ್ನ ಖಾಸಗೀಕರಣ ಮಾಡುವುದನ್ನ ವಿರೋಧಿಸಿ ನಗರದ ಮೋತಿ ವೃತ್ತದಲ್ಲಿ ಸಿಐಟಿಯು ಹಾಗೂ ಕೇಂದ್ರ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ಈ ಟಿವಿ ಭಾರತದೊಂದಿಗೆ ಮಾತನಾಡಿದ ಸಿಐಟಿಯು ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯಬಾಬು, ಇಡೀ ದೇಶವನ್ನೇ ಖಾಸಗೀಕರಣ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಹೇಳುತ್ತಿದ್ದೇವೆ. ಇಂದು ಕೇಂದ್ರ ಸರ್ಕಾರ ವಿದ್ಯುತ್, ಕಲ್ಲಿದ್ದಲು ಸೇರಿ ವಿವಿಧ ಇಲಾಖೆಗಳನ್ನ ಖಾಸಗೀಕರಣ ಮಾಡ್ತಿದೆ. ಎಪಿಎಂಸಿ ಕಾಯ್ದೆಯನ್ನ ತಿದ್ದುಪಡಿ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಬೇಡಿಕೆಗಳು:-
1. ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ಗಳಿಗೆ ಕೆಲಸ ಖಾಯಂಗೊಳಿಸಿ
2. ಎಲ್ಲಾ ಆದಾಯ ರಹಿತ, ತೆರಿಗೆ ಪಾವತಿಸದ ಕುಟುಂಬಗಳಿಗೆ 3 ತಿಂಗಳವರೆಗೆ 7,500 ರೂ. ನಗದು ವರ್ಗಾಯಿಸಿ
3. ಯೋಜನಾ ಕಾರ್ಮಿಕರಿಗೆ ಗೌರವ ಧನ ನೀಡಿ
4. ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ವಿಸ್ತರಿಸಿ, ವಲಸೆ ಕಾರ್ಮಿಕರಿಗೂ ಉದ್ಯೋಗ ನೀಡಿ