ಹೊಸಪೇಟೆ:ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ರಸಗೊಬ್ಬರ ಮಾರಾಟ ಮಳಿಗೆ ಕೃಷಿ ಅಧಿಕಾರಿ ಶ್ರೀಧರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಮಾರಾಟಗಾರರು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರದಲ್ಲಿ ನಮೂದಿಸಿ, ರೈತರಿಗೆ ರಸಗೊಬ್ಬರ ವಿತರಣೆ ಮಾಡಬೇಕು. ಆಧಾರ್ ಕಾರ್ಡ್ ಅನ್ನು ಪಡೆಯಬೇಕು. ಪಿಒಎಸ್ ಯಂತ್ರದಲ್ಲಿನ ಮಾಹಿತಿ ಮಳಿಗೆಯಲ್ಲಿನ ರಸಗೊಬ್ಬರ ದಾಸ್ತಾನುಗೆ ಸರಿಹೊಂದಬೇಕು. ವ್ಯತ್ಯಾಸ ಬರಬಾರದು ಎಂದರು.