ಕರ್ನಾಟಕ

karnataka

ETV Bharat / state

ಫಿಕ್ಸ್‌ ಆಗಿದ್ದ ಮದುವೆ ತಡ ಮಾಡಿದ್ದಕ್ಕೆ ಟವರ್‌ ಏರಿ ಕುಳಿತ ಹೊಸಪೇಟೆ ಯುವಕ: ಮುಂದೇನಾಯ್ತು?

ಪೋಷಕರು ಮದುವೆ ತಡ ಮಾಡುತ್ತಿದ್ದಾರೆ ಎಂದು ಯುವಕನೋರ್ವ ಟವರ್‌ ಏರಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಟ್ಟು ಯುವಕನನ್ನು ಟವರ್‌ ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

A Youth climbed tower for delayed marriage in hospet taluk
ಫಿಕ್ಸ್‌ ಆಗಿದ್ದ ಮದುವೆ ತಡ ಮಾಡಿದ್ದಕ್ಕೆ ಟವರ್‌ ಏರಿ ಕುಳಿತ ಯುವಕ; ಮುಂದೇನಾಯ್ತು..?

By

Published : Jun 14, 2021, 6:00 PM IST

ಹೊಸಪೇಟೆ: ಮಾತುಕತೆಯಾಗಿದ್ದ ಯುವತಿ ಜೊತೆ ಮದುವೆ ತಡ ಮಾಡಲಾಗುತ್ತಿದೆ ಎಂದು ಮುನಿಸಿಕೊಂಡ ಯುವಕನೋರ್ವ ಟವರ್ ಏರಿ ಕುಳಿತ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ. ಚಿರಂಜೀವಿ (23) ಟವರ್‌ ಏರಿ ಕುಳಿತಿದ್ದ ಭೂಪ.

ಫಿಕ್ಸ್‌ ಆಗಿದ್ದ ಮದುವೆ ತಡ ಮಾಡಿದ್ದಕ್ಕೆ ಟವರ್‌ ಏರಿ ಕುಳಿತ ಯುವಕ; ಮುಂದೇನಾಯ್ತು..?

ಪುತ್ರನಿಗೆ ಮದುವೆ ಮಾಡಬೇಕೆಂದು ಪೋಷಕರು ಯುವತಿಯನ್ನು ಹುಡುಕಿ ಮಾತುಕತೆ ಮಾಡಿಕೊಂಡಿದ್ದರು. ಆದರೆ ಚಿರಂಜೀವಿಗಿಂತ ಹಿರಿಯ ಸಹೋದರನಿಗೆ ಮದುವೆ ಆಗಲಿ ಅಂತ ಮನೆಯಲ್ಲಿ ಮಾತುಕತೆ ಮಾಡಲಾಗಿದೆ. ಆದರೆ, ಯುವಕ ನನಗೆ ಹುಡುಗಿ ಫಿಕ್ಸ್ ಮಾಡಿದ್ದಿರಿ, ಯಾಕೆ ಮದುವೆ ತಡ ಮಾಡುತ್ತಿದ್ದೀರಿ, ನನಗೆ ಮದುವೆ ಬೇಕು ಎಂದು ಟವರ್ ಏರಿ ಹಠ ಹಿಡಿದಿದ್ದಾನೆ.

ಕೊನೆಗೆ ಹರಸಾಹಸ ಮಾಡಿ ಪೊಲೀಸರು ಹಾಗೂ ಸ್ಥಳೀಯರು, ಮನವೊಲಿಸಿ ಯುವಕನನ್ನು ಟವರ್ ನಿಂದ ಕೆಳಗಿಳಿಸಿದ್ದಾರೆ. 'ನಾನು ಇಳಿದ ಮೇಲೆ ನನಗ್ಯಾರು ಹೊಡಿಬಾರದು' ಅಂತ ಷರತ್ತು ಹಾಕಿ ಟವರ್‌ನಿಂದ ಚಿರಂಜೀವಿ ಕೆಳಗೆ ಇಳಿದಿದ್ದಾನೆ.

ABOUT THE AUTHOR

...view details