ಬಳ್ಳಾರಿ:ಮದ್ಯದ ಅಮಲಿನಲ್ಲಿ ತನ್ನ ಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಲೆ ಮಾಡಿ ವಿಕೃತಿ ಮೆರೆದ ಘಟನೆಯು ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ.
ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಲೆ ಮಾಡಿದ ವಿಕೃತ ವ್ಯಕ್ತಿ - intoxication of alcohol
ಮದ್ಯದ ಅಮಲಿನಲ್ಲಿ ತನ್ನ ಪಕ್ಕದಲ್ಲೇ ಮಲಗಿದ್ದ ಪತ್ನಿಯನ್ನೇ ಕೊಡಲಿಯಿಂದ ಕೊಲೆ ಮಾಡಿ ವಿಕೃತಿ ಮೆರೆದ ಘಟನೆ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ವಡ್ಡಿನಹಳ್ಳಿ ತಾಂಡದಲ್ಲಿ ನಡೆದಿದೆ. ಸದ್ಯ ಈ ಕುರಿತು ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಹಡಗಲಿ ತಾಲೂಕಿನ ವಾಚ್ಯಾನಾಯ್ಕ ಎಂಬ ವ್ಯಕ್ತಿ ತನ್ನ ಪತ್ನಿ ಜ್ಯೋತಿಬಾಯಿ (40) ಯನ್ನು ಕೊಡಲಿಯಿಂದ ಮರ್ಡರ್ ಮಾಡಿದ್ದು, ಸದ್ಯ ಆತ ಹಡಗಲಿ ಪೊಲೀಸರ ಅತಿಥಿಯಾಗಿದ್ದಾನೆ. ಈಕೆ ಕೂಲಿ ಕಾರ್ಮಿಕರಾಗಿದ್ದು ಇದೀಗ ತನ್ನ ಪತಿಯ ಕುಡಿತದ ಅಮಲಿಗೆ ಬಲಿಯಾಗಿದ್ದಾಳೆ.
ಗುರುವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವನೆ ಮಾಡಿ ಮನೆಗೆ ತೆರಳಿದ್ದ ವಾಚ್ಯಾನಾಯ್ಕ ಅವರೊಂದಿಗೆ ಪತ್ನಿ ಜ್ಯೋತಿಬಾಯಿ ಅವರು ಜಗಳಕ್ಕಿಳಿದಿದ್ದಾರೆ. ಅದೇ ಸಿಟ್ಟಿನಿಂದಾಗಿ ರಾತ್ರಿ ವೇಳೆ ತನ್ನ ಪಕ್ಕದಲ್ಲೇ ಮಲಗಿದ್ದ ಆಕೆಯ ಕತ್ತಿಗೆ ಕೊಡಲಿಯಿಂದಲೇ ಕೊಚ್ಚಿ ಕೊಲೆಗೈದಿದ್ದಾರೆ. ನಿದ್ರೆಗೆ ಜಾರಿದ್ದ ಜ್ಯೋತಿಬಾಯಿ ರಕ್ತದ ಮಡುವಿನಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಸದ್ಯ ಹಡಗಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.