ಕರ್ನಾಟಕ

karnataka

ETV Bharat / state

ಸಕಾಲಕ್ಕೆ ಸಿಗದ ಚಿಕಿತ್ಸೆ... ಬಳ್ಳಾರಿಯಲ್ಲಿ ಬಾಲಕಿ ಸಾವು

ತೀವ್ರ ಜ್ವರವಿದ್ದುದರಿಂದ ಇದು ಕೊರೊನಾ ಸೋಂಕು ಅಥವಾ ಡೆಂಗ್ಯೂ ಜ್ವರದ ಗುಣಲಕ್ಷಣ ಎಂಬ ಕಾರಣಕ್ಕೆ ಸಕಾಲಕ್ಕೆ ಚಿಕಿತ್ಸೆ ದೊರೆಯದ್ದಕ್ಕೆ ಬಳ್ಳಾರಿಯಲ್ಲಿ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ.

ಬಳ್ಳಾರಿಯಲ್ಲಿ ಬಾಲಕಿ ಸಾವು
ಬಳ್ಳಾರಿಯಲ್ಲಿ ಬಾಲಕಿ ಸಾವು

By

Published : Apr 15, 2020, 9:29 AM IST

ಬಳ್ಳಾರಿ: ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರಕದ ಕಾರಣ ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಕ್ಷಣಾರ್ಧದಲ್ಲಿಯೇ ಸಾವನ್ನಪ್ಪಿದ್ದಾಳೆ.

ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ನಿವಾಸಿಗಳಾದ ರವಿಕುಮಾರ ಮತ್ತು ಶಕುಂತಲಾ ದಂಪತಿಯ ಪುತ್ರಿ ಸ್ನೇಹಾ (13) ಮೃತ ಬಾಲಕಿ.

ಘಟನೆಯ ವಿವರ:

ಬಂಡ್ರಿ ಗ್ರಾಮದಲ್ಲಿ ಏಳನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ‌ ಸ್ನೇಹಾಗೆ ಮಾ.28ರಂದು ಜ್ವರ ಕಾಣಿಸಿಕೊಂಡಿದ್ದರಿಂದ ಸಂಡೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಜ್ವರ ನಿಯಂತ್ರಣಕ್ಕೆ ಬಂದಿತ್ತು. ಆಕೆಯನ್ನು ಮನೆಗೆ ಕರೆದೊಯ್ದ ಮಾರನೇ ದಿನವೇ (ಮಾರ್ಚ್ 29) ಪುನಃ ಜ್ವರ ಕಾಣಿಸಿಕೊಂಡಿತ್ತು.

ಗಾಬರಿಗೊಂಡ ಬಾಲಕಿಯ ಪೋಷಕರು ಸಂಡೂರು ಸರ್ಕಾರಿ ಆಸ್ಪತ್ರೆಗೆ ಪು‌ನಃ ದಾಖಲಿಸಿದ್ದರು. ವೈದ್ಯರ ಸೂಚನೆಯ ಮೇರೆಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೂ ವಾಸಿಯಾಗದ ಕಾರಣ ಖಾಸಗಿ ಆಸ್ಪತ್ರೆಯ‌ ಮೊರೆ ಹೋಗಿದ್ರು. ಆದ್ರೆ, ಖಾಸಗಿ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರಕದ ಕಾರಣ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಕ್ಷಣದಲ್ಲಿಯೇ ಬಾಲಕಿ ಸ್ನೇಹಾ ಕೊನೆಯುಸಿರೆಳೆದಿದ್ದಾಳೆ.

ತೀವ್ರ ಜ್ವರ ಕೊರೊನಾ ಸೋಂಕು ಅಥವಾ ಡೆಂಗ್ಯೂ ಜ್ವರದ ಗುಣ ಲಕ್ಷಣವಾಗಿರುವ ಹಿನ್ನೆಲೆ ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ಹಿಂದೇಟು ಹಾಕಿದ್ದರು. ಸಕಾಲಕ್ಕೆ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ದೊರಕಿದ್ದರೆ ನನ್ನ ಮಗಳು ಬದುಕುಳಿಯುವ ಸಾಧ್ಯತೆಗಳಿದ್ದವು ಎಂದು ಮೃತ ಬಾಲಕಿಯ ತಂದೆ ರವಿಕುಮಾರ ದೂರಿದ್ದಾರೆ.

ABOUT THE AUTHOR

...view details