ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ 95ರ ಹರೆಯದ ಅಜ್ಜಿಯೊಬ್ಬರು ಗುಣಮುಖರಾಗಿದ್ದಾರೆ.
95ರ ಹರೆಯದ ಅಜ್ಜಿ ಕೋವಿಡ್ನಿಂದ ಗುಣಮುಖ! - ಕೋವಿಡ್ ಕೇರ್ ಸೆಂಟರ್
ಅಲ್ಪ ಪ್ರಮಾಣದಲ್ಲಿ ಬಿಪಿ, ಶುಗರ್ ಕಾಯಿಲೆ ಹೊಂದಿದ್ದ 95ರ ಹರೆಯದ ಅಜ್ಜಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
basavva
ಕೋವಿಡ್ ಕೇರ್ ಸೆಂಟರ್ನಿಂದ ಗುಣಮುಖರಾಗಿ ಹೊರಗಡೆ ಬಂದ ತೋರಣಗಲ್ಲು ಮೂಲದ ಬಸಮ್ಮ(95) ಎಂಬುವವರು ಕೋವಿಡ್ ಕೇರ್ ಸೆಂಟರ್ನಲ್ಲಿ ಅತ್ಯುತ್ತಮ ಸೇವೆ ನೀಡಲಾಗುತ್ತೆ ಎಂದಿದ್ದಾರೆ.
ಸಕಾಲದಲ್ಲಿ ಮಾತ್ರೆ, ಊಟೋಪಚಾರವನ್ನ ಮಾಡಲಾಗುತ್ತೆ. ಕೋವಿಡ್ ಸೋಂಕಿತರ ಆರೈಕೆ ಬಹಳ ಚೆನ್ನಾಗಿಯೇ ಇದೆ. ನನಗೆ ಬಿಪಿ, ಶುಗರ್ ಕಾಯಿಲೆ ಅಲ್ಪ ಪ್ರಮಾಣದಲ್ಲಿತ್ತು. ಕೋವಿಡ್ ಸೋಂಕಿಗೆ ಒಳಗಾಗಿದ್ದ ನನಗೆ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯವನ್ನ ಕೋವಿಡ್ ಕೇರ್ ಸೆಂಟರ್ನ ಸಿಬ್ಬಂದಿ ಹಾಗೂ ವೈದ್ಯರು ಮಾಡಿದ್ರು ಎಂದು ಅಜ್ಜಿ ಬಸಮ್ಮ ಹೇಳಿದರು.