ಕರ್ನಾಟಕ

karnataka

ETV Bharat / state

ಕಾರ್ಮಿಕರ ವಜಾ: ಬಾಲು ಇಂಡಿಯಾ ಆಟೋಮೊಬೈಲ್ ಕಂಪನಿ ವಿರುದ್ಧ ಪ್ರತಿಭಟನೆ - Balu India Automobile Company

ಹಲವು ವರ್ಷಗಳಿಂದ ಕಾಕತಿ ಕೈಗಾರಿಕಾ ಪ್ರದೇಶದಲ್ಲಿ ಮುಂಬೈ ಮೂಲದ ಜಸ್ಪಾಲ್ ಸಿಂಗ್ ಚಂದೊಕ್ ಎಂಬುವರಿಗೆ ಸೇರಿದ ಬಾಲು ಇಂಡಿಯಾ ಕಂಪನಿಯಲ್ಲಿ 143 ಜನರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಕೆಲಸಕ್ಕೆ ಬರಬೇಡಿ ಎಂದು ಕಂಪನಿ ಗೇಟ್‌ಗೆ ನೋಟಿಸ್ ಅಂಟಿಸಿದ್ದಾರೆ.

Workers protest
ಬಾಲು ಇಂಡಿಯಾ ಆಟೋಮೊಬೈಲ್ ಕಂಪನಿ ವಿರುದ್ದ ಪ್ರತಿಭಟನೆ

By

Published : May 12, 2020, 5:00 PM IST

ಬೆಳಗಾವಿ: ಲಾಕ್‌ಡೌನ್ ಸಡಿಲಿಕೆಯಾದ ಮೇಲೆ ಒಂದು ವಾರಗಳ ಕಾಲ ಕೆಲಸ ಮಾಡಿಸಿಕೊಂಡು ಇದೀಗ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ ಆರೋಪಿಸಿ ಬಾಲು ಇಂಡಿಯಾ ಆಟೋಮೊಬೈಲ್ ಕಂಪನಿ ಕಾರ್ಮಿಕರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.

ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಕಂಪನಿ ಕಾರ್ಮಿಕರು, ಕಳೆದ ಹಲವು ವರ್ಷಗಳಿಂದ ಕಾಕತಿ ಕೈಗಾರಿಕಾ ಪ್ರದೇಶದಲ್ಲಿ ಮುಂಬೈ ಮೂಲದ ಜಸ್ಪಾಲ್ ಸಿಂಗ್ ಚಂದೊಕ್ ಎಂಬುವರಿಗೆ ಸೇರಿದ ಬಾಲು ಇಂಡಿಯಾ ಕಂಪನಿಯಲ್ಲಿ 143 ಜನರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಮಾ.24 ರಿಂದ ಕಂಪನಿ ಬಂದ್ ಮಾಡಲಾಗಿತ್ತು. ಆದರೀಗ ಲಾಕ್‌ಡೌನ್ ಸಡಿಲಿಕೆ ಬಳಿಕ ಮೇ 4ರಂದು ಮತ್ತೆ ಕಂಪನಿ ಆರಂಭಿಸಿ, ಮೇ 11ರವರೆಗೆ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ಇದೀಗ ಮೇ 11ರಿಂದ ಕೆಲಸಕ್ಕೆ ಬರಬೇಡಿ ಎಂದು ಕಂಪನಿ ಗೇಟ್‌ಗೆ ನೋಟಿಸ್ ಅಂಟಿಸಿದ್ದಾರೆ. ಇದರಿಂದ ಕಾರ್ಮಿಕರು ಜೀವನ ನಡೆಸುವುದು ದುಸ್ಥರವಾಗಿದೆ ಎಂದು ಕಾರ್ಮಿಕರು ತಮ್ಮ ಅಳಲುನ್ನು ತೋಡಿಕೊಂಡಿದ್ದಾರೆ.ಅಲ್ಲದೇ ಕಳೆದ ಎರಡು ತಿಂಗಳ ಹಾಗೂ ಒಂದು ವಾರದಿಂದ ಕೆಲಸ ಮಾಡಿಸಿಕೊಂಡ ಸಂಬಳವನ್ನೂ ನೀಡದೆ ಕಂಪನಿ ಬಂದ್ ಮಾಡಲಾಗಿದೆ. ಇದಲ್ಲದೇ ಒಂದು ವರ್ಷದಿಂದ ಸರಿಯಾಗಿ ಸಂಬಳ ನೀಡುತ್ತಿಲ್ಲ. ಇನ್ನು ಕಾರ್ಮಿಕರಿಗೆ ಸಿಗಬೇಕಾದ ಸರಿಯಾದ ಸವಲತ್ತುಗಳೂ ಕಂಪನಿಯಿಂದ ಸಿಗುತ್ತಿಲ್ಲ. ಇದರಿಂದಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 143 ಕಾರ್ಮಿಕರು ಅತಂತ್ರರಾಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಕಾರ್ಮಿಕರು ಮನವಿ ಸಲ್ಲಿಸಿದರು.

ABOUT THE AUTHOR

...view details