ಕರ್ನಾಟಕ

karnataka

ETV Bharat / state

ಕಮಲದ ನೆರಳಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ: ಲಕ್ಷ್ಮಣ್ ಸವದಿ

ಬಿಜೆಪಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ ಎಂಬುದು ಊಹಾಪೋಹ ಎಂದು ಲಕ್ಷ್ಮಣ್ ಸವದಿ ಹೇಳಿದರು.

Vidhan Parishad Member Lakshana Savadi
ವಿಧಾನಪರಿಷತ್​ ಸದಸ್ಯ ಲಕ್ಷಣ ಸವದಿ

By

Published : Mar 9, 2023, 2:19 PM IST

Updated : Mar 9, 2023, 4:24 PM IST

ಬೆಳಗಾವಿ ಬಿಜೆಪಿ ವಲಯದಲ್ಲಿ ಒಗ್ಗಟ್ಟಿದೆ: ಲಕ್ಷ್ಮಣ್ ಸವದಿ

ಚಿಕ್ಕೋಡಿ (ಬೆಳಗಾವಿ) :ಬೆಳಗಾವಿ ಬಿಜೆಪಿ ವಲಯದಲ್ಲಿ ಒಗ್ಗಟ್ಟಿಲ್ಲ ಎಂದು ಕೆಲವರು ಬಿಂಬಿಸುತ್ತಿದ್ದಾರೆ. ಆದರೆ ಎಲ್ಲರೂ ಒಂದೇ ವೇದಿಕೆಯಲ್ಲಿ ಇದ್ದುಕೊಂಡೇ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿಯ ವಿಧಾನಪರಿಷತ್​ ಸದಸ್ಯ ಲಕ್ಷಣ ಸವದಿ ಹೇಳಿದರು. ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪದಲ್ಲಿ ಭಾಗವಹಿಸುವ ಮೊದಲು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಸವದಿ, ಬೆಳಗಾವಿಯ 18 ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುತ್ತೇವೆ. ಬಿಜೆಪಿಯಲ್ಲಿ ಭಿನ್ನಮತ ಇದೆ ಎಂಬುದು ಕೇವಲ ಎಲ್ಲವೂ ಊಹಾಪೋಹ ಎಂದರು.

ಕೆಲವು ಸಮಾವೇಶಕ್ಕೆ ಅನಿವಾರ್ಯವಾಗಿ ಅಥವಾ ವೈಯಕ್ತಿಕ ಕಾರಣಗಳಿಂದ ನಾಯಕರು ಬರುವುದಿಲ್ಲ. ಇದನ್ನೇ ನೋಡಿ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಎಂದು ಹೇಳುತ್ತಾರೆ. ನಾನು ಕೂಡ ಗೋಕಾಕ್ ಜನ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭಕ್ಕೆ ಹೋಗಿರಲಿಲ್ಲ. ನನ್ನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದಕ್ಕೆ ಕಾರ್ಯಕ್ರಮಕ್ಕೆ ಗೈರಾಗಿದ್ದೆ. ಈ ಬಗ್ಗೆ ಜಿಲ್ಲೆಯ ಸಂಚಾಲಕರಿಗೆ ಮಾಹಿತಿ ನೀಡಿದ್ದೆ ಎಂದು ಹೇಳಿದರು. ಒಂದು ಕ್ಷೇತ್ರದಲ್ಲಿ ನಾಯಕರು ಬರದೇ ಇದ್ದಾಗ ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ನಾವು ಎಲ್ಲರೂ ಒಂದಾಗಿ ಕಮಲದ ಕೆಳಗಿನ ನೆರಳಿನ ಕೆಲಸ ಮಾಡುತ್ತೇವೆ ಎಂದರು.

ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳುತ್ತಾ ನಿಪ್ಪಾಣಿಯಲ್ಲಿ ರಮೇಶ್ ಜಾರಕಿಹೊಳಿ ಗೈರು ವಿಚಾರಕ್ಕೆ ಸವದಿ ಸಮರ್ಥನೆ ನೀಡಿದರು. ಶಾಸಕ ರಮೇಶ್​ ಜಾರಕಿಹೊಳಿ ಮಾತನಾಡಿ, ಕೊಣ್ಣೂರ ಗ್ರಾಮದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮಕ್ಕೆ ಹೋಗಿದ್ದೆ. ನಿಪ್ಪಾಣಿಯಲ್ಲಿ ನಾನು ಉದ್ದೇಶಪೂರ್ವಕ ಗೈರಾಗಿಲ್ಲ. ಪಕ್ಷದ ವೇದಿಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಏನೇ ಭಿನ್ನಾಭಿಪ್ರಾಯ ಇದ್ದರೂ ನಮ್ಮ ಮನೆಗೆ ಮಾತ್ರ, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.

ಕಾಗವಾಡ ನೀರಾವರಿ ಯೋಜನೆಗಳನ್ನು ಆದಷ್ಟು ಬೇಗನೆ ಮುಗಿಸುತ್ತೇವೆ. ಲಕ್ಷ್ಮಣ್ ಸವದಿ ನಾನು ಜೊತೆಗೆ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡುತ್ತೇವೆ. ಚುನಾವಣೆ ಪೂರ್ವದಲ್ಲಿ ಸಿಎಂ ಅವರನ್ನು ಕರೆದುಕೊಂಡು ಬಂದು ಯೋಜನೆಗೆ ಚಾಲನೆ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ :ಅಥಣಿಯಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಠಳ್ಳಿ ಅಥವಾ ನಾನು ಇಬ್ಬರಲ್ಲಿ ಒಬ್ಬರು ಸ್ಪರ್ಧೆ: ಲಕ್ಷ್ಮಣ್ ಸವದಿ

Last Updated : Mar 9, 2023, 4:24 PM IST

ABOUT THE AUTHOR

...view details