ಚಿಕ್ಕೋಡಿ: ಧಾರಾಕಾರ ಮಳೆಯಿಂದ ಗೋಡೆ ಕುಸಿದು ವೃದ್ಧ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭೀಕರ ಮಳೆಗೆ ಮನೆ ಗೋಡೆ ಕುಸಿದು ವೃದ್ಧ ಬಲಿ - ಹುಕ್ಕೇರಿ ಪೊಲೀಸರು
ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮದಿಹಳ್ಳಿ ಗ್ರಾಮದಲ್ಲಿ ಮಣ್ಣಿನ ಗೋಡೆಯ ಮನೆ ಕುಸಿದು ವೃದ್ಧ ಸಾವನ್ನಪ್ಪಿದ್ದಾನೆ.
ವೃದ್ದ ಸಾವು
ಬಾಳಪ್ಪಾ ಕಬ್ಬೂರಿ (75) ಮೃತ ದುರ್ದೈವಿ. ಸತತ ಮಳೆಯಿಂದಾಗಿ ಮಣ್ಣಿನ ಗೋಡೆಯ ಮನೆಯು ಕುಸಿದು ಮೇಲೆ ಬಿದ್ದ ಪರಿಣಾಮ ಬಾಳಪ್ಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹುಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.