ಕರ್ನಾಟಕ

karnataka

ETV Bharat / state

ರಕ್ಷಕ್​ ಕಾರ್ಯಾಚರಣೆಯಲ್ಲಿ ಯೋಧ ಹುತಾತ್ಮ: ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಬಂದಿಳಿದ ಪಾರ್ಥಿವ ಶರೀರ - ರಕ್ಷಕ್​ ಕಾರ್ಯಾಚರಣೆ,

ಪುಲ್ವಾಮಾದಲ್ಲಿ ರಕ್ಷಕ್ ಕಾರ್ಯಾಚರಣೆ ವೇಳೆ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ವಿಜಯಪುರ ಜಿಲ್ಲೆಯ ಯೋಧ ಕಾಶೀರಾಯ ಹುತಾತ್ಮರಾಗಿದ್ದರು. ಅವರ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

belgavi
ಯೋಧನ ಪಾರ್ಥಿವ ಶರೀರ

By

Published : Jul 4, 2021, 6:41 AM IST

Updated : Jul 4, 2021, 6:56 AM IST

ಬೆಳಗಾವಿ: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮನಾದ ವಿಜಯಪುರ ಜಿಲ್ಲೆಯ ಯೋಧನ ಪಾರ್ಥಿವ ಶರೀರ ವಿಶೇಷ ವಿಮಾನದ ಮೂಲಕ ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಬಳಿಕ ಸಾಂಬ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ವಿಜಯಪುರಕ್ಕೆ ಪಾರ್ಥಿವ ಶರೀರವನ್ನು ಸಾಗಿಸಲಾಗಿದೆ. ವಿಜಯಪುರ ಜಿಲ್ಲೆಯ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ (35) ‌ಉಗ್ರರ ಗುಂಡಿಗೆ ಬಲಿಯಾದ ಯೋಧ.

ಇದನ್ನು ಓದಿ: ಪುಲ್ವಾಮಾ ಎನ್‌ಕೌಂಟರ್‌: ಎಲ್‌ಇಟಿ ಉಗ್ರ ಸೇರಿ ಐವರ ಹತ್ಯೆ; ಓರ್ವ ಯೋಧ ಹುತಾತ್ಮ

ಪುಲ್ವಾಮಾದಲ್ಲಿ ರಕ್ಷಕ್ ಕಾರ್ಯಾಚರಣೆ ವೇಳೆ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ವಿಜಯಪುರ ಜಿಲ್ಲೆಯ ಯೋಧ ಕಾಶೀರಾಯ ಹುತಾತ್ಮರಾಗಿದ್ದರು. ಬಳಿಕ ಪುಲ್ವಾಮಾದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಧ‌ನ ಪಾರ್ಥಿವ ಶರೀರ ಇಂದು ಬೆಳಗ್ಗೆ 8ಗಂಟೆಗೆ ಉಕ್ಕಲಿ ಗ್ರಾಮ ತಲುಪಲಿದೆ. ಬಳಿಕ‌ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Last Updated : Jul 4, 2021, 6:56 AM IST

ABOUT THE AUTHOR

...view details