ಅಥಣಿ (ಬೆಳಗಾವಿ): ಅಥಣಿಯ ಸಂಬರಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗುಂಡೂರಾವ್ ಮಿರಜಕರ್ (35) ಮೃತ ಪಿಡಿಒ ಆಗಿದ್ದು, ತಮ್ಮ ಹುಟ್ಟುಹಬ್ಬದಂದೇ ಕೊನೆಯುಸಿರೆಳೆದಿದ್ದಾರೆ.
ಹುಟ್ಟಿದ ದಿನದಂದೇ ಸಂಬರಗಿ ಪಿಡಿಒ ಬೈಕ್ ಅಘಾತಕ್ಕೆ ಬಲಿ - ಪಿಡಿಒ ಸಾವು
ಗುರುವಾರ ತಡರಾತ್ರಿ ಹಬ್ಯಾಳ ಕ್ರಾಸ್ ಹತ್ತಿರ ಬೈಕ್ನಲ್ಲಿ ಬರುತ್ತಿರುವಾಗ ಆಯತಪ್ಪಿ ಬಿದ್ದಿದ್ದರು. ಅಪಘಾತದ ಭೀಕರತೆಗೆ ಪಿಡಿಒ ಗುಂಡೂರಾವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದುರ್ದೈವಿ ಸಂಬರಗಿ ಗ್ರಾಮದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಮನೆಗೆ ಬರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹುಟ್ಟುಹಬ್ಬದಂತೆ ಸಂಬರಗಿ ಪಿಡಿಒ ಬೈಕ್ ಅಘಾತಕ್ಕೆ ಬಲಿ
ಗುರುವಾರ ತಡರಾತ್ರಿ ಹಬ್ಯಾಳ ಕ್ರಾಸ್ ಹತ್ತಿರ ಬೈಕ್ನಲ್ಲಿ ಬರುತ್ತಿರುವಾಗ ಆಯಾತಪ್ಪಿ ಬಿದ್ದಿದ್ದರು. ಅಪಘಾತದ ಭೀಕರತೆಗೆ ಪಿಡಿಒ ಗುಂಡೂರಾವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದುರ್ದೈವಿ ಸಂಬರಗಿ ಗ್ರಾಮದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮನೆಗೆ ಬರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.