ಕರ್ನಾಟಕ

karnataka

ETV Bharat / state

ದಸರಾಕ್ಕೆಂದು ಊರಿಗೆ ವಾಪಸಾಗುವಾಗ ಬೈಕ್ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ - ಈಟಿವಿ ಭಾರತ ಕನ್ನಡ

ದಸರಾ ಹಬ್ಬಕ್ಕೆಂದು ಊರಿಗೆ ವಾಪಸ್​ ಆಗುವಾಗ ಬೈಕ್​ ಟೈರ್​ ಪಂಕ್ಚರ್​ ಆಗಿ ಬೈಕ್ ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿಯ ಕುರ್ಲಿ ಗ್ರಾಮದಲ್ಲಿ ನಡೆದಿದೆ.

road-accident-at-belagavi-two-died
ದಸರಾಕ್ಕೆಂದು ಊರಿಗೆ ವಾಪಸ್ಸಾಗುವಾಗ ಬೈಕ್ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

By

Published : Oct 4, 2022, 8:19 PM IST

ಬೆಳಗಾವಿ :ದಸರಾ ಹಬ್ಬಕ್ಕೆಂದು ಊರಿಗೆ ಹಿಂತಿರುತ್ತಿದ್ದಾಗ ಬೈಕ್​ ಟೈರ್ ಪಂಕ್ಚರ್ ಆಗಿ ಬೈಕ್​ ಅಪಘಾತಕ್ಕೀಡಾಗಿದ್ದು, ಮಹಿಳೆ ಮತ್ತು ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಿಪ್ಪಾಣಿ ತಾಲೂಕಿನ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುರ್ಲಿ ಗ್ರಾಮದ ಬಳಿ ನಡೆದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ‌ ಮುಗುಳಿಹಾಳ ಗ್ರಾಮದ ಲಕ್ಷ್ಮೀ ಕೊಪ್ಪದ (25) ಹಾಗೂ ಭಾಗ್ಯಶ್ರೀ ವಕಮಿ (13)‌ ಅಪಘಾತದಲ್ಲಿ ಮೃತಪಟ್ಟಿದ್ದು, ರಾಮದರ್ಗು ತಾಲೂಕಿನ ಕಟಕೋಳ ಗ್ರಾಮದ ಹಣಮಂತ ಸಕ್ರಿ (23) ಮಾರುತಿ ಚುನಾಮಾದಾರ (6) ಗಂಭೀರ ಗಾಯಗೊಂಡಿದ್ದಾರೆ.‌

ಮೂಲತಃ ಕರ್ನಾಟಕದವರೇ ಆದ ಮೃತರು ಮಹಾರಾಷ್ಟ್ರಕ್ಕೆ ಕೆಲಸಕ್ಕೆಂದು ತೆರಳಿದ್ದರು. ದಸರಾ ಹಬ್ಬದ ನಿಮಿತ್ತ‌ ಇಂದು ಊರಿಗೆ ವಾಪಸ್​ ಆಗುವಾಗ ಬೈಕ್‌ ಟೈರ್​ ಪಂಕ್ಚರ್ ಆಗಿ‌ದೆ‌. ಈ ವೇಳೆ ನೆಲಕ್ಕೆ ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ನಿಪ್ಪಾಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಿಪ್ಪಾಣಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಬೆಲ್ಜಿಯಂನಿಂದ ಬೆಂಗಳೂರಿಗೆ ಎಂಡಿಎಂಎ ಆಮದು ಮಾಡಿಕೊಂಡ ಮಹಿಳೆಯ ಬಂಧನ

ABOUT THE AUTHOR

...view details