ಕರ್ನಾಟಕ

karnataka

ETV Bharat / state

ಅಥಣಿಯಲ್ಲೊಂದು ವಿಲಕ್ಷಣ ಘಟನೆ.. ಯುವಕನ ಮೇಲೆ ಪುರುಷನಿಂದಲೇ ಅತ್ಯಾಚಾರ.. - ಯುವಕನ ಮೇಲೆ ಪುರುಷನಿಂದಲೇ ಅತ್ಯಾಚಾರ

ಕೆಲಸ ಮುಗಿಸಿ ಮನೆಗೆ ತೆರಳಲು ಬಸ್​ಗಾಗಿ ಯುವಕ ಕಾಯುತ್ತಿದ್ದ ವೇಳೆ ಬೈಕ್ ಮೇಲೆ ಬಂದ ಆರೋಪಿ ಡ್ರಾಪ್ ಕೊಡುವುದಾಗಿ ಹೇಳಿ ಗಾಡಿ ಮೇಲೆ ಹತ್ತಿಸಿಕೊಂಡಿದ್ದಾರೆ. ಮಾರ್ಗ ಮಧ್ಯೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸಾಲದೆಂಬಂತೆ ವಿಚಾರ ಯಾರಿಗೂ ಹೇಳಬಾರದೆಂದು ಜೀವ ಬೆದರಿಕೆ ಹಾಕಿದ್ದಾರೆ..

Rape on a boy by a man in Athani
ಯುವಕನ ಮೇಲೆ ಪುರುಷನಿಂದಲೇ ಅತ್ಯಾಚಾರ

By

Published : Oct 10, 2021, 4:46 PM IST

ಅಥಣಿ (ಬೆಳಗಾವಿ) :ಯುವಕನೋರ್ವ ಯುವಕನ ಮೇಲೆಯೇ ಅತ್ಯಾಚಾರ ಎಸಗಿರುವ ವಿಲಕ್ಷಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 24 ವರ್ಷದ ಯುವಕನ ಮೇಲೆ ಅಕ್ಟೋಬರ್ 5ರಂದು ಇನ್ನೋರ್ವ ಯುವಕ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಥಣಿಯ ಹೋಟೆಲ್​ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುವ ಯುವಕನ ಮೇಲೆ ಅತ್ಯಾಚಾರ ಎಸಗಲಾಗಿದೆ. ಅತ್ಯಾಚಾರ ಎಸಗಿದ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ರಾಜು ಆಚಾರಟ್ಟಿ ಎಂಬುವರ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸ ಮುಗಿಸಿ ಮನೆಗೆ ತೆರಳಲು ಬಸ್​ಗಾಗಿ ಯುವಕ ಕಾಯುತ್ತಿದ್ದ ವೇಳೆ ಬೈಕ್ ಮೇಲೆ ಬಂದ ಆರೋಪಿ ಡ್ರಾಪ್ ಕೊಡುವುದಾಗಿ ಹೇಳಿ ಗಾಡಿ ಮೇಲೆ ಹತ್ತಿಸಿಕೊಂಡಿದ್ದಾರೆ. ಮಾರ್ಗ ಮಧ್ಯೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸಾಲದೆಂಬಂತೆ ವಿಚಾರ ಯಾರಿಗೂ ಹೇಳಬಾರದೆಂದು ಜೀವ ಬೆದರಿಕೆ ಹಾಕಿದ್ದಾರೆ.

ಸಂತ್ರಸ್ತ ಯುವಕ ಅಥಣಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ರಾಜು ಆಚಾರಟ್ಟಿಯನ್ನು ಬಂಧಿಸಿದ್ದಾರೆ.

ಓದಿ:ಪುಷ್ಪಕ್ ಎಕ್ಸ್​ಪ್ರೆಸ್ ಗ್ಯಾಂಗ್​​ರೇಪ್ ಕೇಸ್​: ಮತ್ತಿಬ್ಬರು ಆರೋಪಿಗಳು ಅರೆಸ್ಟ್​

ABOUT THE AUTHOR

...view details