ಕರ್ನಾಟಕ

karnataka

ETV Bharat / state

ಜನರ ರಕ್ಷಣೆಗೆ ಸದಾ ಸಿದ್ಧ ಈ 'ರಾಣಿ ಅಂಬಿ'.. ಪ್ರವಾಹ ಲೆಕ್ಕಿಸದೇ ದಡ ಸೇರಿಸುತ್ತಾಳೆ ಕೆಚ್ಚೆದೆಯ ಯುವತಿ - ವಾಹ ಲೆಕ್ಕಿಸದೇ ಬೋಟ್​ ನಡೆಸುವ ಯುವತಿ

ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕ್ಕಿದ್ದವರ ರಕ್ಷಣೆಗೆ ಬೋಟ್​​ನಲ್ಲಿ ಆಗಮಿಸುವ ಯುವತಿ ಜನರ ರಕ್ಷಣೆಯ ಜೊತೆಗೆ ತನ್ನ ಜೀವನವನ್ನೂ ಮುನ್ನಡೆಸುತ್ತಿದ್ದಾರೆ. ಚಿಂಚಲಿ ಹಾಗೂ ಮೊಳವಾಡ ಗ್ರಾಮದ ನಡುವೆ ಹರಿಯುವ ಕೃಷ್ಣಾ ನದಿಗೆ ಸೇತುವೆ ಇಲ್ಲದ ಕಾರಣ ಈಕೆಯ ಬೋಟ್​​​ ಸಂಪರ್ಕ ಕೊಂಡಿಯಾಗಿದೆ. ನೆರೆಯಂತಹ ಪರಿಸ್ಥಿತಿಯಲ್ಲಿ ನಡುಗಡ್ಡೆಯಲ್ಲಿ ಸಿಲುಕಿದವರನ್ನ ದಡ ಸೇರಿಸಿ ಸಾರ್ಥಕತೆ ಮೆರೆದಿದ್ದಾರೆ.

rani-ambi-who-serving-save-people-with-her-boat-in-krishna-river-flood
ಪ್ರವಾಹ ಲೆಕ್ಕಿಸದೇ ಬೋಟ್​ ನಡೆಸುವ ಯುವತಿ

By

Published : Aug 1, 2021, 4:00 PM IST

ಚಿಕ್ಕೋಡಿ (ಬೆಳಗಾವಿ): ಕಷ್ಟದಲ್ಲಾದವರೇ ಆಪತ್ಬಾಂಧವರು ಅನ್ನೋ ಹಾಗೆ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದವರ ಪಾಲಿಗೆ ಈ ಯುವತಿ ನಿಜಕ್ಕೂ ದೇವರಾಗಿ ಬಂದಿದ್ದಾಳೆ. ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ಕಾಗವಾಡ ತಾಲೂಕಿನ ಮೊಳವಾಡ ಗ್ರಾಮದ ನಿವಾಸಿ ರಾಣಿ ಅಂಬಿ ಗಂಡೆದೆಯ ರಾಣಿ ಅಂತಲೇ ಹೆಸರಾಗಿದ್ದಾರೆ.

ತಂದೆ ಮಾಡುತ್ತಿದ್ದ ಈ ಕಾಯಕವನ್ನ ಆತ ತೀರಿಕೊಂಡ ಬಳಿಕ ರಾಣಿ ಅಜ್ಜಿ ಮಾಡುತ್ತಿದ್ದರು. ಬಳಿಕ ಅಜ್ಜಿಯೂ ತೀರಿಕೊಂಡಿದ್ದು, ಈಗ ಸಂಸಾರ ನೌಕೆ ಸಾಗಿಸಲು ರಾಣಿ ಬೋಟ್​ ಓಡಿಸುವ ಕಾಯಕ ಮಾಡುತ್ತಿದ್ದಾರೆ. ಚಿಂಚಲಿ ಹಾಗೂ ಮೊಳವಾಡ ಗ್ರಾಮಗಳ ನಡುವೆ ಹರಿದಿರುವ ಕೃಷ್ಣಾ ನದಿಗೆ ಈಕೆಯ ಬೋಟ್​ ಸಂಪರ್ಕ ಕೊಂಡಿಯಾಗಿದೆ.

ಪ್ರವಾಹ ಲೆಕ್ಕಿಸದೇ ಬೋಟ್​ ನಡೆಸುವ ಯುವತಿ

ಉಕ್ಕಿ ಹರಿಯುವ ಕೃಷ್ಣೆಯ ಪ್ರವಾಹ ಲೆಕ್ಕಿಸದೆ, ಬೋಟ್​ ಏರುವ ರಾಣಿ, ಈವರೆಗೆ ಸುಮಾರು ಎರಡು ಸಾವಿರ ಜನರನ್ನ ಸುರಕ್ಷಿತವಾಗಿ ದಡ ಮುಟ್ಟಿಸಿದ್ದಾರೆ. 2019ರ ಮಹಾಪ್ರವಾಹದಲ್ಲಿ ಊರ ಜನರನ್ನು ಕೃಷ್ಣೆಯ ರಭಸದಲ್ಲಿ ದಡ ಸೇರಿಸಿದ್ದರು. ಈ ವರ್ಷವೂ ಜನರ ಜೀವ ಕಾಪಾಡಿದ್ದಾರೆ.

ಮೊದಲೆಲ್ಲಾ ಹುಟ್ಟು ಹಿಡಿದು ಬೋಟ್ ನಡೆಸಬೇಕಿತ್ತು, ಈ ವಿಷಯ ತಿಳಿದ ಶಾಸಕ ಶ್ರೀಮಂತ ಪಾಟೀಲ್ ಅವರ ಪೌಂಡೇಶನ್ ವತಿಯಿಂದ ಪೆಟ್ರೋಲ್ ಚಾಲಿತ ಬೋಟ್​ ನೀಡಲಾಯಿತು. ಹೀಗಾಗಿ ಪ್ರವಾಹದ ಸಮಯದಲ್ಲಿ ಜನರು ಮಾತ್ರವಲ್ಲ, ಜಾನುವಾರುಗಳನ್ನೂ ಸಹ ಸುರಕ್ಷಿತವಾಗಿ ದಡ ಸೇರಿಸಿದ್ದಾಳೆ ರಾಣಿ.

ತನ್ನ ಜೀವನ ನಿರ್ವಹಣೆಗೆ ಈ ಬೋಟ್​ ಅನ್ನೇ ನಂಬಿ ಬದುಕುತ್ತಿರುವ ರಾಣಿ, ಪ್ರವಾಹದ ಸಂದರ್ಭ ಹೊರತಾಗಿ ಉಳಿದ ದಿನಗಳಲ್ಲಿ ಒಬ್ಬರಿಗೆ 5 ರೂಪಾಯಿ ಹಾಗೂ ಬೈಕ್​​ಗೆ 10 ರೂಪಾಯಿ ಶುಲ್ಕ ಪಡೆಯುತ್ತಾರೆ. ಈಕೆಯ ಕಾರ್ಯಕ್ಕೆ ಗ್ರಾಮಸ್ಥರು ಸಲಾಮ್ ಹೊಡೆದು, ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಓದಿ:ಕಳ್ಳದಾರಿ ಮೂಲಕ ಬೆಳಗಾವಿ ನಗರಕ್ಕೆ ಆಗಮಿಸುತ್ತಿರುವ ಮಹಾರಾಷ್ಟ್ರದ ಜನರು

ABOUT THE AUTHOR

...view details