ಬೆಳಗಾವಿ:ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಸಮಯದಲ್ಲಿ ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಅವರು ಮಂತ್ರಿ ಆಗಬಹುದು. ಅವರು ಮಂತ್ರಿ ಆದ್ರೆ ಖುಷಿ ಪಡ್ತಿನಿ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಉಮೇಶ್ ಕತ್ತಿ ಮಂತ್ರಿ ಆದ್ರೆ ಅದಕ್ಕಿಂತ ಖುಷಿಯೇನಿದೆ? ಸಚಿವ ಜಾರಕಿಹೊಳಿ
ಹೆಚ್. ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ಸಿಗಬೇಕು. ಉಮೇಶ್ ಕತ್ತಿಯೂ ಮಂತ್ರಿ ಆಗಬಹುದು. ಅವರು ಮಂತ್ರಿಯಾದ್ರೆ ಸಂತೋಷ ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಮತ್ತು ಹೈಕಮಾಂಡ್ ನಾಯಕರು ನಿರ್ಣಯ ತೆಗೆದುಕೊಳ್ಳುತ್ತಾರೆ. ಹೆಚ್. ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್ ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ಸಿಗಬೇಕು. ಉಮೇಶ್ ಕತ್ತಿಯೂ ಮಂತ್ರಿ ಆಗಬಹುದು. ಆದ್ರೆ ಸಂತೋಷ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುವುದೆಲ್ಲ ಸುಳ್ಳು. ನಾನು ಸಾಮಾನ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಮಂತ್ರಿಗಿರಿಗಾಗಿ ಯಾರ ಪರವಾಗಿ ಮಾತಾಡಲ್ಲ ಎಂದರು. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂತ್ರಿಯಾದ ಬಳಿಕ ಭೇಟಿಯಾಗಿರಲಿಲ್ಲ. ಹೀಗಾಗಿ ಭೇಟಿಯಾಗಿದ್ದೇನೆ. ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಆದ್ರೆ ಮಾಧ್ಯಮಗಳಿಗೆ ಹೇಳುತ್ತೇನೆ ಎಂದರು.
TAGGED:
ಸಚಿವ ರಮೇಶ್ ಜಾರಕಿಹೊಳಿ