ಕರ್ನಾಟಕ

karnataka

ETV Bharat / state

ಸೋಮವಾರದ ತೀರ್ಪಿನವರೆಗೂ ಮಹದಾಯಿ ಕುರಿತು ಏನನ್ನೂ ಪ್ರಸಾರ ಮಾಡಬೇಡಿ: ಸಚಿವ ರಮೇಶ್​ ಜಾರಕಿಹೊಳಿ

ಸೋಮವಾರದವರೆಗೂ ಮಹದಾಯಿಗೆ ಸಂಬಂಧಿಸಿದ ಯಾವ ವಿಚಾರವನ್ನೂ ಪ್ರಸಾರ ಮಾಡಬೇಡಿ. ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ನಂತರ ಪ್ರಸಾರ ಮಾಡಿ ಎಂದು ರಮೇಶ್​ ಜಾರಕೀಹೊಳಿ ಮಾಧ್ಯಮದವರಲ್ಲಿ ಮನವಿ ಮಾಡಿದರು.

ramesh-jarakiholi
ಸಚಿವ ರಮೇಶ ಜಾರಕಿಹೊಳಿ

By

Published : Feb 29, 2020, 8:49 PM IST

ಬೆಳಗಾವಿ: ಮಹದಾಯಿ ವಿಚಾರದಲ್ಲಿ ಚಾಚು ತಪ್ಪದೇ ಸುಪ್ರೀಂಕೋರ್ಟ್ ಆದೇಶದಂತೆ ಮುಂದುವರೆಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ‌ ಹೇಳಿದರು.

ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸೋಮವಾರದವರೆಗೂ ಮಹದಾಯಿಗೆ ಸಂಬಂಧಿಸಿದ ಯಾವ ವಿಚಾರವನ್ನೂ ಪ್ರಸಾರ ಮಾಡಬೇಡಿ. ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ನಂತರ ಪ್ರಸಾರ ಮಾಡಿ ಎಂದು ಮಾಧ್ಯಮದವರಲ್ಲಿ ಮನವಿ ಮಾಡಿದ ಅವರು, ನಾನು‌ ಇಲ್ಲಿ ಬರಬಾರದಿತ್ತು. ರೈತರ ಮನವಿ‌ ಮೇರೆಗೆ‌ ಕಣಕುಂಬಿಗೆ ಇಂದು ಆಗಮಿಸಿದ್ದೇನೆ ಎಂದರು.

ಸಚಿವ ರಮೇಶ್​ ಜಾರಕಿಹೊಳಿ

ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೆಲವೊಂದು ಪಾಯಿಂಟ್ಸ್ ಕ್ಲೀಯರ್ ಮಾಡಿಕೊಂಡು ಮುಂದುವರೆಯುತ್ತೇವೆ. ಈಗ 13.42 ಟಿಎಂಸಿ ನೀರು ಬಳಕೆಗೆ ಅವಕಾಶ ಕೊಟ್ಟಿದ್ದಾರೆ. ಜುಲೈನಲ್ಲಿ ಮಹದಾಯಿ ಬಗ್ಗೆ ಅಂತಿಮ ತೀರ್ಪು ಬರಲಿದ್ದು, ಆ ವೇಳೆಗೆ ಇನ್ನೂ ಹೆಚ್ಚು ನೀರು ಬಿಡಬಹುದು ಎಂಬ ಆಶಾಭಾವನೆ ಇದೆ ಎಂದರು.

ಸುಪ್ರೀಂ ಆದೇಶಕ್ಕೂ ಮೊದಲು ಬಜೆಟ್‌ನಲ್ಲಿ 200 ಕೋಟಿ ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಕೇಳಿದ್ದೇವೆ. ಮಹದಾಯಿ ಯೋಜನೆಗೆ 1500 ಕೋಟಿ ಅಲ್ಲ‌, 2000 ಕೋಟಿ ಹಣ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಎಲ್ಲಾ ರೈತರಿಗೂ ಅನುಕೂಲವಾಗುವಂತೆ ಕಾನೂನು ತೊಡಕುಗಳನ್ನೆಲ್ಲಾ ನಿವಾರಿಸಿ ಮುಂದುವರೆಯುತ್ತೇನೆ.

ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆ ಅನುಮತಿ ಅಗತ್ಯ ಇಲ್ಲ ಅನಿಸುತ್ತೆ. ಈ ಬಗ್ಗೆಯೂ ಅಧ್ಯಯನ ಮಾಡ್ತೇವೆ ಎಂದರು. ಮಹದಾಯಿ ವಿಚಾರವಾಗಿ ಹೆಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಡಿಕೆಶಿ ಸೇರಿದಂತೆ ಈ ಹಿಂದಿನ ಎಲ್ಲಾ ಜಲಸಂಪನ್ಮೂಲ ಸಚಿವರ ಜೊತೆ ಚರ್ಚೆ ಮಾತನಾಡುತ್ತೇನೆ ಎಂದ್ರು.

ABOUT THE AUTHOR

...view details