ಕರ್ನಾಟಕ

karnataka

ETV Bharat / state

ಎರಡು ಗಂಟೆಯಲ್ಲಿ 15 ಜನರಿಗೆ ಕಚ್ಚಿದ ಹುಚ್ಚು ನಾಯಿ : ಬೆಚ್ಚಿಬಿದ್ದ ಸವದತ್ತಿ ಜನ - ಹುಚ್ಚು ನಾಯಿ ಕಡಿತ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ 15 ಜನರ ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿದೆ.

Rabies Dog attack on 15 people
ಹುಚ್ಚು ನಾಯಿ ದಾಳಿ

By

Published : Jul 18, 2021, 10:24 AM IST

ಬೆಳಗಾವಿ :ಜಿಲ್ಲೆಯ ಜನರನ್ನು ಹುಚ್ಚು ನಾಯಿಯೊಂದು ಬೆಚ್ಚಿಬೀಳಿಸಿದೆ. ಎರಡು ಗಂಟೆಯ ಅವಧಿಯಲ್ಲಿ ಹುಚ್ಚು ನಾಯಿ 15 ಜನರ ಮೇಲೆ ದಾಳಿ ನಡೆಸಿದ ಘಟನೆಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಶನಿವಾರ ನಡೆದಿದೆ.

ಸವದತ್ತಿ ತಾಲೂಕಿನ ಯರಝರವಿ, ಮಳಗಲಿ, ಹೊಸೂರ ಗ್ರಾಮದಲ್ಲಿ ನಾಯಿ ದಾಳಿ ಮಾಡಿದೆ. ಮೂರು ಗ್ರಾಮಗಳ ಒಟ್ಟು 15 ರಷ್ಟು ಜನರ ಮೇಲೆ ನಾಯಿ ದಾಳಿ ನಡೆಸಿದೆ. ಗಾಯಾಳುಗಳನ್ನು ಯರಗಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಯಿ ದಾಳಿಯಿಂದ ಜನ ಗಾಯಗೊಂಡಿರುವುದು

ಓದಿ : ಕಳ್ಳತನ ಆರೋಪ: ಅಥಣಿಯಲ್ಲಿ ಯುವಕನ ಕೈಕಾಲು ಕಟ್ಟಿ ಹಾಕಿ ಥಳಿತ

ಜನರ ಕೈ, ಕಾಲುಗಳು ಸೇರಿದಂತೆ ದೇಹದ ಇತರ ಭಾಗಗಳಿಗೆ ನಾಯಿ ಕಚ್ಚಿದೆ. ಹುಚ್ಚು ನಾಯಿ ದಾಳಿಯಿಂದ ಜನ ಭಯ ಭೀತರಾಗಿದ್ದಾರೆ.

ABOUT THE AUTHOR

...view details