ಕರ್ನಾಟಕ

karnataka

ETV Bharat / state

ರೈತ ಸಂಘಟನೆಯಿಂದ ಪಿಎಂ-ಸಿಎಂ ಅಣಕು ಶವಯಾತ್ರೆ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು - ಬೆಳಗಾವಿಯಲ್ಲಿ ಪ್ರತಿಭಟನೆ

ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಣಕು ಶವಯಾತ್ರೆಗೆ ಮುಂದಾದ ರೈತ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈತ ಸಂಘಟನೆಯಿಂದ ಪಿಎಂ-ಸಿಎಂ ಅಣಕು ಶವಯಾತ್ರೆ
ರೈತ ಸಂಘಟನೆಯಿಂದ ಪಿಎಂ-ಸಿಎಂ ಅಣಕು ಶವಯಾತ್ರೆ

By

Published : Sep 28, 2020, 3:32 PM IST

Updated : Sep 28, 2020, 4:20 PM IST

ಬೆಳಗಾವಿ: ರೈತ ವಿರೋಧಿ ನೀತಿ ಖಂಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಣಕು ಶವಯಾತ್ರೆಗೆ ಮುಂದಾದ ರೈತ ಸಂಘಟನೆ ಮುಖಂಡರನ್ನು ಪುಣೆ-ಬೆಂಗಳೂರು ಹೆದ್ದಾರಿ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಬಸ್​ನಲ್ಲಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ರೈತ ಸಂಘಟನೆಯಿಂದ ಪಿಎಂ-ಸಿಎಂ ಅಣಕು ಶವಯಾತ್ರೆ

ಬೆಳಗಾವಿ ಚೆನ್ನಮ್ಮ ವೃತ್ತದಿಂದ ಸುವರ್ಣ ಸೌಧವರೆಗೆ ರೈತ ಸಂಘಟನೆ ಮುಖಂಡರು ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗುತ್ತಿದ್ದರು. ಈ ವೇಳೆ ಪುಣೆ-ಬೆಂಗಳೂರು ಹೆದ್ದಾರಿಗೆ ಬರುತ್ತಿದಂತೆ ಪಿಎಂ ಮೋದಿ ಹಾಗೂ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಅಣಕು ಶವಯಾತ್ರೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಡೆದಿದ್ದಾರೆ.

ರೈತ ಸಂಘಟನೆಗಳಿಗೆ ಹಲವು ಕನ್ನಡ, ಕಾರ್ಮಿಕ ಸಂಘಟನೆಗಳು ಸಾಥ್ ನೀಡಿದ್ದವು. ಇನ್ನು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಇನ್ನು ಕೆಲವರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Last Updated : Sep 28, 2020, 4:20 PM IST

ABOUT THE AUTHOR

...view details