ಬೆಳಗಾವಿ:ಮಹಾನಗರ ಪಾಲಿಕೆಯ ಕಸ ವಿಲೇವಾರಿ ಮಾಡುವ ವಾಹನ ಡಿವೈಡರ್ಗೆ ಡಿಕ್ಕಿ ಹೊಡೆದು ಪೌರಕಾರ್ಮಿಕನೋರ್ವ ಇಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾರೆ. ಆತನ ಕುಟುಬಂಸ್ಥರಿಗೆ ಆರ್ಥಿಕ ಪರಿಹಾರ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾಸ್ಪತ್ರೆಯ ಎದುರಿಗೆ ಸಹ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.
ಟಿಪ್ಪರ್ನಿಂದ ಬಿದ್ದು ಸಾವನ್ನಪ್ಪಿದ ಪೌರಕಾರ್ಮಿಕ: ಆರ್ಥಿಕ ಪರಿಹಾರಕ್ಕೆ ಆಗ್ರಹ - ಪೌರಕಾರ್ಮಿಕನ ಕುಟುಂಬಸ್ಥರಿಗೆ ಆರ್ಥಿಕ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ
ಕೊರೊನಾ ಸಂಕಷ್ಟದ ನಡುವೆಯೂ ಪೌರ ಕಾರ್ಮಿಕರು ನಗರ ಸ್ವಚ್ಛತೆಗಾಗಿ ಪ್ರತಿದಿನ ಶ್ರಮಿಸುತ್ತಿದೆ. ಹಾಗಾಗಿ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಪೌರ ಕಾರ್ಮಿಕರು, ಮೃತರ ಕುಟುಂಬಸ್ಥರಿಂದ ಅನುಕಂಪದ ಪರಿಹಾರ ನೀಡುವಂತೆ ಒತ್ತಾಯಿಸಿದರು. ಕೊರೊನಾ ಸಂಕಷ್ಟದ ನಡುವೆಯೂ ಪೌರ ಕಾರ್ಮಿಕರು ನಗರ ಸ್ವಚ್ಛತೆಗಾಗಿ ಪ್ರತಿದಿನ ಶ್ರಮಿಸುತ್ತಾ ಕುಟುಂಬದ ನಿರ್ವಹಣೆ ಮಾಡುತ್ತಿದ್ದ ಜಿತೇಂದ್ರನ ಸಾವಿನಿಂದಾಗಿ ಅವನ್ನನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬವೀಗ ಬೀದಿಗೆ ಬರಲಿದೆ. ಹೀಗಾಗಿ ಕುಟುಂಬಕ್ಕೆ ಮಹಾನಗರ ಪಾಲಿಕೆ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸಾಗರ ಸುಂದರ ಲಾಖೆ, ನಗರ ಪ್ರದೇಶದ ಕಸವನ್ನು ವಿಲೇವಾರಿ ಮಾಡಲು ತುರಮುರಿ ಕಚರಾ ಡಿಪೋಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದರಲ್ಲಿ ಜಿತೇಂದ್ರ ಡಾವಾಳೆ ಎಂಬ ಪೌರ ಕಾರ್ಮಿಕ ಬಡವನಾಗಿದ್ದು, ಆತನಿಗೆ ಪತ್ನಿ ಹಾಗೂ ನಾಲ್ವರು ಮಕ್ಕಳಿದ್ದಾರೆ. ಹೀಗಾಗಿ ಆತನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಬೇಕು. ಜೊತೆಗೆ ಅದೇ ವಾಹನದಿಂದ ಮೂವರು ಕಾರ್ಮಿಕರಿಗೆ ಬಿದ್ದು ಗಾಯಗೊಂಡಿದ್ದಾರೆ. ಅವರಿಗೂ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಬೇಕು ಎಂದು ಒತ್ತಾಯಿಸಿದರು.