ಕರ್ನಾಟಕ

karnataka

ETV Bharat / state

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸಕಲ ಸಿದ್ಧತೆ: ಅಭ್ಯರ್ಥಿಗಳಿಂದ ಕೊನೆ ಕಸರತ್ತು, ನಾಳೆ ಮತದಾನ - Electoral officer Dr. Hariskumar

ಬೆಳಗಾವಿ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಸಕಲ ಸಿದ್ದತೆ ನಡೆಲಾಗಿದೆ ಎಂದು ಚುನಾವಣಾಧಿಕಾರಿ ಡಾ. ಹರೀಶಕುಮಾರ್ ಮಾಹಿತಿ ನೀಡಿದ್ದಾರೆ.

Electoral officer Dr. Hariskumar
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸಕಲ ಸಿದ್ಧತೆ

By

Published : Apr 16, 2021, 7:08 PM IST

ಬೆಳಗಾವಿ:ಬೆಳಗಾವಿ ‌ಲೋಕಸಭೆ ಉಪಚುನಾವಣೆಯ ಮತದಾನ ನಾಳೆ ನಡೆಯಲಿದ್ದು, ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕು ‌ಹೆಚ್ಚುತ್ತಿರುವ ಕಾರಣ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾರದರ್ಶಕ ಮತದಾನಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಚುನಾವಣಾಧಿಕಾರಿ ಡಾ. ಹರೀಶಕುಮಾರ್ ಮಾಹಿತಿ ನೀಡಿದ್ದಾರೆ.

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸಕಲ ಸಿದ್ಧತೆ

ಕೇಂದ್ರ ಸಚಿವ ಸುರೇಶ ಅಂಗಡಿ ಅಕಾಲಿಕ ಮರಣದಿಂದ ತೆರವಾದ ಬೆಳಗಾವಿ ‌ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ‌ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಹಾಗೂ ಕಾಂಗ್ರೆಸ್ ‌ಅಭ್ಯರ್ಥಿ ಕೊನೆ ಕಸರತ್ತಿನಲ್ಲಿ ತೊಡಗಿದ್ದಾರೆ. ನಿನ್ನೆಯೇ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಇಂದು ಅಭ್ಯರ್ಥಿಗಳಷ್ಟೇ ಮನೆ ಮನೆಗೆ ತೆರಳಿ ಮತಯಾಚನೆ ‌ಮಾಡುತ್ತಿದ್ದಾರೆ. ಮಂಗಳಾ ಅಂಗಡಿ ಪರ ಪ್ರಚಾರಕ್ಕೆ ಎಂದು ಆಗಮಿಸಿದ್ದ ಸಿಎಂ‌ ಬಿ.ಎಸ್. ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ನಿನ್ನೆ ಸಂಜೆಯೇ ಕ್ಷೇತ್ರದಿಂದ‌ ಕಾಲ್ಕಿತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ‌ಜಾರಕಿಹೊಳಿ ಗೋಕಾಕ್​ನಲ್ಲಿ ಹಾಗೂ ಬಿಜೆಪಿ ‌ಅಭ್ಯರ್ಥಿ ಮಂಗಳಾ ಅಂಗಡಿ ಬೆಳಗಾವಿ ‌ನಗರದಲ್ಲಿಂದು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ.

ಮತದಾರರ ಸಂಖ್ಯೆ: ಬೆಳಗಾವಿ ‌ಉತ್ತರ, ಬೆಳಗಾವಿ ‌ದಕ್ಷಿಣ, ಬೆಳಗಾವಿ ‌ಗ್ರಾಮೀಣ, ಬೈಲಹೊಂಗಲ, ‌ಸವದತ್ತಿ, ರಾಮದುರ್ಗ, ‌ಗೋಕಾಕ್​​ ಹಾಗೂ ಅರಬಾವಿ ‌ಸೇರಿ ಬೆಳಗಾವಿ ಲೋಕಸಭೆ ‌ಕ್ಷೇತ್ರ ಎಂಟು ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಹೊಂದಿದೆ. ಇದರಲ್ಲಿ 18,13,567 ಮತದಾರರಿದ್ದಾರೆ. ಇದರಲ್ಲಿ ‌9,11,033 ಪುರುಷ, 9,02476 ಮಹಿಳೆಯರು ಹಾಗೂ 58 ಇತರ ಮತದಾರರಿದ್ದಾರೆ. ಬೆಳಗಾವಿ ‌ಕ್ಷೇತ್ರದಲ್ಲಿ ಒಟ್ಟು 25,327 ಯುವ ಮತದಾರರು, 8047 ಸೇವಾನಿರತ ಮತದಾರರಿದ್ದಾರೆ.

16 ಸಖಿ ಮತಗಟ್ಟೆಗಳ ನಿರ್ಮಾಣ: ಮಹಿಳಾ ಮತದಾರರನ್ನು ಸೆಳೆಯಲು ‌ಬೆಳಗಾವಿ ಕ್ಷೇತ್ರದಲ್ಲಿ 16 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಉಳಿದಂತೆ ಬೆಳಗಾವಿ ‌ಲೋಕಸಭೆ ಕ್ಷೇತ್ರದಲ್ಲಿ 2,566 ಮತಗಟ್ಟೆ ತೆರೆಯಲಾಗಿದೆ. ಇದರಲ್ಲಿ ಸೂಕ್ಷ್ಮ 587 ಹಾಗೂ ಅತಿಸೂಕ್ಷ್ಮ 118 ಮತಟ್ಟೆಗಳಿವೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನಕ್ಕೆ ಸಿಆರ್​​ಪಿಎಫ್ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ. ಇನ್ನುಳಿದಂತೆ ‌ಶಾಂತಿಯುತ ಮತದಾನಕ್ಕೆ ಒಟ್ಟು ‌3 ಸಾವಿರಕ್ಕೂ ‌ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಹಾಗೂ ಎಸ್​ಪಿ ಲಕ್ಷ್ಮಣ ನಿಂಬರಗಿ ನೇತೃತ್ವದ ಭದ್ರತೆ ವಹಿಸಲಾಗಿದೆ.

ಸ್ಕ್ರೀನಿಂಗ್ ‌ಕಡ್ಡಾಯ: ಕೊರೊನಾ ಸೋಂಕು ‌ಹೆಚ್ಚುತ್ತಿರುವ ಹಿನ್ನೆಲೆ ‌ಎಲ್ಲ ಮತಗಟ್ಟೆಗಳಲ್ಲಿ ಸ್ಕ್ರೀನಿಂಗ್ ‌ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಸೋಂಕಿನ ಲಕ್ಷ್ಮಣಗಳು ಕಂಡು ಬಂದರೆ ತಕ್ಷಣವೇ ‌ಆರ್​ಟಿಪಿಸಿಆರ್ ಟೆಸ್ಟ್​ಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಸೋಂಕು ‌ದೃಢಪಟ್ಟರೆ ಅಂತಹವರಿಗೆ ಪಿಪಿಇ ಕಿಟ್ ಹಾಕಿಕೊಂಡು ಕೊನೆಯ ಒಂದು ಗಂಟೆ ಮತದಾನಕ್ಕೆ ‌ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಚುನಾವಣೆ ಅಧಿಕಾರ ‌ಡಾ. ಹರೀಶಕುಮಾರ್ ಮಾಹಿತಿ ನೀಡಿದರು.

ABOUT THE AUTHOR

...view details