ಕರ್ನಾಟಕ

karnataka

ETV Bharat / state

ಸ್ಮಾರ್ಟ್​​ಸಿಟಿ ಕಾಮಗಾರಿ ವೇಳೆ ಅವಘಡ: ಪೈಪ್​​​​​​ಲೈನ್ ಒಡೆದು ಅನಿಲ ಸೋರಿಕೆ - pipe line breaks Gas leak

ಬೆಳಗಾವಿಯ ಸದಾಶಿವ ನಗರದ ಬೀಮ್ಸ್​ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಪೈಪ್​​​ಲೈನ್ ಒಡೆದು ಗ್ಯಾಸ್ ಸೋರಿಕೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮದ ದಳದ ಸಿಬ್ಬಂದಿ ಗ್ಯಾಸ್ ಸೋರಿಕೆ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.

Gas leak in Belgavi
ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಅವಘಡ: ಪೈಪ್ ಲೈನ್ ಒಡೆದು ಅನಿಲ ಸೋರಿಕೆ

By

Published : Jul 23, 2020, 1:20 PM IST

ಬೆಳಗಾವಿ: ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಪೈಪ್​​ಲೈನ್ ಒಡೆದು ಗ್ಯಾಸ್ ಸೋರಿಕೆಯಾದ ಘಟನೆ ಬೆಳಗಾವಿಯ ಸದಾಶಿವ ನಗರದ ಬೀಮ್ಸ್​ ರಸ್ತೆಯಲ್ಲಿ ನಡೆದಿದೆ‌.

ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಅವಘಡ: ಪೈಪ್ ಲೈನ್ ಒಡೆದು ಅನಿಲ ಸೋರಿಕೆ

ಈ ಘಟನೆ ಸದಾಶಿವ ನಗರದ ಜನರನ್ನು ಆತಂಕಕ್ಕೆ ದೂಡಿದೆ. ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮದ ದಳದ ಸಿಬ್ಬಂದಿ ಗ್ಯಾಸ್ ಸೋರಿಕೆ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಬೆಳಗಾವಿಯ ವೈಭವ ನಗರದ ಮೇಘಾ ಗ್ಯಾಸ್ ಕಂಪನಿ ಗ್ಯಾಸ್ ಪೂರೈಕೆ ಗುತ್ತಿಗೆ ಪಡೆದಿದೆ. ನಗರದ ಎಲ್ಲ ವಾರ್ಡ್​ಗಳಲ್ಲಿ ಪೈಪ್​​​​ಲೈನ್ ತೆರೆಯಲಾಗಿದ್ದು, ನಗರದ 10 ವಾರ್ಡ್​ಗಳ ವಿವಿಧ ಬಡಾವಣೆಗಳ ನಿವಾಸಿಗಳು ಬಳಸುತ್ತಿದ್ದಾರೆ.

ಇನ್ನುಳಿದ ನಗರದಲ್ಲಿ ಸ್ಮಾರ್ಟ್​​​ ಸಿಟಿ ಕೆಲಸಗಳು ತ್ವರಿತವಾಗಿ ನಡೆಯುತ್ತಿವೆ. ರಸ್ತೆ, ಚರಂಡಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ರೆ ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಜೆಸಿಬಿಯಿಂದ ಅಗೆಯಲಾಗುತ್ತಿದ್ದು, ಗ್ಯಾಸ್ ಪೈಪ್ ಲೈನ್​ಗೆ ಪೆಟ್ಟು ಬೀಳುತ್ತಿದೆ. ಹೀಗಾಗಿ ಗ್ಯಾಸ್ ಲಿಕೇಜ್ ಆಗ್ತಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಮೇಘಾ ಗ್ಯಾಸ್ ಕಂಪನಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details