ಬೆಳಗಾವಿ:ಕೊರೊನಾ ಹಾಗೂ ಮಳೆಯ ಆತಂಕದ ನಡುವೆಯೂ ಕುಂದಾನಗರಿಯಲ್ಲಿ ಗಣೇಶೋತ್ಸವ ಸಡಗರ ಮನೆಮಾಡಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ಸಾರ್ವಜನಿಕರು ಗಣೇಶ ಮೂರ್ತಿಯನ್ನು ಉತ್ಸಾಹದಿಂದ ಪ್ರತಿಷ್ಠಾಪಿಸುತ್ತಿದ್ದಾರೆ.
ಜಿಟಿ-ಜಿಟಿ ಮಳೆ ನಡುವೆ ಗಣಪನ ಆರಾಧನೆ; ಕುಂದಾನಗರಿಯಲ್ಲಿ ಚೌತಿಯ ಸಂಭ್ರಮ - Belgaum Rain
ನಗರದಲ್ಲಿ ಜಿಟಿ-ಜಿಟಿ ಮಳೆಯಾಗುತ್ತಿರುವ ನಡುವೆಯೂ ಜನತೆ ಗಣೇಶ ಮೂರ್ತಿಗಳ ಖರೀದಿಗೆ ಉತ್ಸಾಹದಿಂದಲೇ ಭಾಗಿಯಾಗಿದ್ದರು. ಅಲ್ಲದೆ ಕೊರೊನಾ ನಿಯಮಾವಳಿ ಪ್ರಕಾರ ಚತುರ್ಥಿ ಆಚರಣೆಗೆ ಜನತೆ ಮುಂದಾಗಿದ್ದು, ಅದ್ದೂರಿತನಕ್ಕೆ ಕಡಿವಾಣ ಹಾಕಿ ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.
ಜಿಟಿ-ಜಿಟಿ ಮಳೆಯ ನಡುವೆ ಗಣಪನ ಆರಾಧನೆಗೆ ಮುಂದಾದ ಕುಂದಾನಗರಿ ಜನತೆ
ನಗರದ ಬಾಪಟ್ ಗಲ್ಲಿ, ರವಿವಾರಪೇಟೆ, ಖಡೇಬಜಾರ್ ಸೇರಿದಂತೆ ಇತರ ಕಡೆಗಳಿಂದ ಗಣೇಶನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಮೂರ್ತಿ ಖರೀದಿಗೆ ಮುಂದಾಗಿದ್ದರು.
ಪ್ರತಿ ವರ್ಷವೂ ಗಣಪತಿ ಮೂರ್ತಿಗಳನ್ನು ಮನೆಗೆ ಸಾರ್ವಜನಿಕವಾಗಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಕೊರೊನಾದಿಂದಾಗಿ ಈ ವರ್ಷ ಅದ್ಧೂರಿ ಆಚರಣೆಗೆ ಕಡಿವಾಣ ಬಿದ್ದಿದೆ.