ಬೆಳಗಾವಿ: ಜಿಲ್ಲೆಯಾದ್ಯಂತ ಸತತವಾಗಿ ಸುರಿಯುತ್ತಿರುವ ಮಹಾಮಳೆ ಮತ್ತೊಂದು ಜೀವ ಬಲಿಯಾಗಿದೆ. ಹಳ್ಳದಾಟುತ್ತಿದ್ದ ವೇಳೆ ಎಡವಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮೃತದೇಹ ಇದೀಗ ಪತ್ತೆಯಾಗಿದೆ.
ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಅಲ್ಲಾಭಕ್ಷ ಹುದ್ದಾರ (58) ಎಂಬಾತ ಮೃತಪಟ್ಟಿದ್ದು, ರಾಮದುರ್ಗ ತಾಲೂಕಿನ ಹಳೇತೋರಗಲ್ಲ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಗ್ರಾಮದಲ್ಲಿ ಹಳ್ಳ ದಾಟುವಾಗ ಎಡವಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಲ್ಲಾಭಕ್ಷ ಶವವನ್ನು ಹೊರತೆಗೆದಿದ್ದಾರೆ.
ಹಳ್ಳದಾಟುವಾಗ ಎಡವಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ ಶವವಾಗಿ ಪತ್ತೆ! - Fire Service
ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಮತ್ತೊಂದು ಜೀವ ಬಲಿಯಾಗಿದೆ. ಹಳ್ಳ ದಾಟುವಾಗ ಎಡವಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ.
ಹಳ್ಳದಾಟುವಾಗ ಎಡವಿಬಿದ್ದು ಪ್ರವಾಹದಲ್ಲಿ ಕೊಚ್ಚಿಹೋದ ವ್ಯಕ್ತಿ ಶವವಾಗಿ ಪತ್ತೆ
ಮಲಪ್ರಭಾ ನದಿಗೆ ಬರುತ್ತಿರುವ ನೀರಿನಿಂದ ಗ್ರಾಮದ ಹಳ್ಳಗಳು ತುಂಬಿ ಹರಿಯುತ್ತಿದೆ. ಇನ್ನು ನಿನ್ನೆಯಷ್ಟೇ ಮಹಾಮಳೆಗೆ ಮನೆಕುಸಿದು ಖಾನಾಪುರದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದರು. ಇದೀಗ ಮಹಾಮಳೆ ಎರಡನೇ ಬಲಿ ಪಡೆದಿದೆ.