ಕರ್ನಾಟಕ

karnataka

ETV Bharat / state

ನೀಟ್ ಪರೀಕ್ಷೆ: ದೇಶಕ್ಕೆ ನಾಲ್ಕನೇ ರ‍್ಯಾಂಕ್​​​ ಪಡೆದ ಬೆಳಗಾವಿಯ ರುಚಾ - ಈಟಿವಿ ಭಾರತ ಕನ್ನಡ

ದೇಶದಲ್ಲಿ ರುಚಾ ಸೇರಿ ಒಟ್ಟು ನಾಲ್ವರು ವಿದ್ಯಾರ್ಥಿಗಳು 715 ಅಂಕ ಪಡೆದಿದ್ದಾರೆ. ಆದರೆ, ದ್ವಿತೀಯ ಪಿಯು ಪರೀಕ್ಷೆಯ ಜೀವ ವಿಜ್ಞಾನ ವಿಷಯದಲ್ಲಿ ಒಂದು ಅಂಕ ಕಡಿಮೆ ಇದ್ದ ಕಾರಣಕ್ಕೆ ರುಚಾ ನಾಲ್ಕನೇ‌ ರ‍್ಯಾಂಕ್​ ಬಂದಿದೆ.

neet-exam-belagavis-rucha-get-fourth-rank-in-country
ನೀಟ್ ಪರೀಕ್ಷೆ: ದೇಶಕ್ಕೆ ನಾಲ್ಕನೇ ರ‍್ಯಾಂಕ್​​​ ಪಡೆದ ಬೆಳಗಾವಿಯ ರುಚಾ

By

Published : Sep 8, 2022, 10:36 PM IST

ಬೆಳಗಾವಿ: ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಬೆಳಗಾವಿ ತಾಲೂಕಿನ ಉಚಗಾಂವ್ ಗ್ರಾಮದ ರುಚಾ ಪಾವಶೆ ನಾಲ್ಕನೇ ರ‍್ಯಾಂಕ್​​​ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೇ, ನೀಟ್ ಪರೀಕ್ಷೆಯಲ್ಲಿ ಸರಿಸಮಾನ ಅಂಕ ಹಂಚಿಕೊಂಡ ದೇಶದ ಮೊದಲ ನಾಲ್ವರು ವಿದ್ಯಾರ್ಥಿಗಳ ಪೈಕಿ ರುಚಾ ಪಾವಶೆ ಕೂಡ ಒಬ್ಬರಾಗಿದ್ದಾರೆ.

ದೇಶದಲ್ಲಿ ರುಚಾ ಸೇರಿ ಒಟ್ಟು ನಾಲ್ವರು ವಿದ್ಯಾರ್ಥಿಗಳು 715 ಅಂಕ ಪಡೆದಿದ್ದಾರೆ. ಆದರೆ, ದ್ವಿತೀಯ ಪಿಯು ಪರೀಕ್ಷೆಯ ಜೀವ ವಿಜ್ಞಾನ ವಿಷಯದಲ್ಲಿ ರುಚಾಗೆ ಒಂದು ಅಂಕ ಕಡಿಮೆ ಇದ್ದ ಕಾರಣಕ್ಕೆ ರುಚಾಗೆ ನಾಲ್ಕನೇ‌ ರ‍್ಯಾಂಕ್ ಅನ್ನು ನೀಟ್ ಸಮಿತಿ ನೀಡಿದೆ.

ಬೆಳಗಾವಿಯ ಕೆಎಲ್ಇ ಸಂಸ್ಥೆಯ ಆರ್‌ಎಲ್ಎಸ್ ಕಾಲೇಜಿನಲ್ಲಿ ರುಚಾ ವ್ಯಾಸಂಗ ಮಾಡಿದ್ದು, ವೈದ್ಯ ಕುಟುಂಬಕ್ಕೆ ಸೇರಿರುವ ರುಚಾಗೂ ವೈದ್ಯೆ ಆಗುವ ಕನಸು ಇದೆ. ಅಜ್ಜ, ಅಪ್ಪ-ಅಮ್ಮನಂತೆ ರುಚಾಗೂ ವೈದ್ಯೆ ಆಗುವ ಬಯಕೆ ಇದೆ. ಈ ಮೂಲಕ ಪಾವಶೆ ಕುಟುಂಬದಲ್ಲಿ ಮೂರನೇ ತಲೆಮಾರಿನ ವೈದ್ಯೆಯಾಗುವ ಇಚ್ಛೆ ಹೊಂದಿದ್ದಾರೆ.

ರುಚಾ ಅವರ ಪೋಷಕರು ಡಾ.ಮೋಹನ್ ಪಾವಶೆ ಹಾಗೂ ಡಾ.ಸ್ಮಿತಾ ಪಾವಶೆ ಅವರಾಗಿದ್ದು, ಇವರು ಉಚಗಾಂವನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಡೆಸುತ್ತಿದ್ದಾರೆ. ಯಾವುದೇ ಕೋಚಿಂಗ್ ಪಡೆಯದೇ ಮನೆಯಲ್ಲಿ ಓದಿ ರುಚಾ ಈ ಸಾಧನೆ ಮಾಡಿದ್ದಾರೆ.

ನಿತ್ಯ 10-12 ಗಂಟೆ ಅಭ್ಯಾಸ ಹಾಗೂ ಹಳೆ ಪ್ರಶ್ನೆ ಪತ್ರಿಕೆ ಬಿಡಿಸಲು ಹೆಚ್ಚಿನ ಸಮಯ ವ್ಯಯಿಸುತ್ತಿದ್ದೆ ಎಂದಿರುವ ರುಚಾ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಬಯಕೆ ಇದೆ ಎಂದು ಹೇಳಿಕೊಂಡಿದ್ದಾರೆ.

ABOUT THE AUTHOR

...view details