ಕರ್ನಾಟಕ

karnataka

ETV Bharat / state

ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡದಿದ್ರೆ ನನ್ನ ತಮ್ಮನಿಗೆ ನೀಡಿ: ಸಚಿವ ಉಮೇಶ್ ಕತ್ತಿ - Suresh angadi family

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಟಿಕೆಟ್ ವಿಚಾರವಾಗಿ ಸಚಿವ ಉಮೇಶ್ ಕತ್ತಿ ಸಹೋದರನ ಪರ‌ ಬ್ಯಾಟಿಂಗ್ ‌ಮಾಡಿದ್ದಾರೆ.

ddsd
ಸಹೋದರನ ಪರ‌ ಸಚಿವ ಉಮೇಶ್ ಕತ್ತಿ ಬ್ಯಾಟಿಂಗ್

By

Published : Jan 23, 2021, 8:52 PM IST

ಬೆಳಗಾವಿ: ಲೋಕಸಭಾ ಉಪಚುನಾವಣೆಯಲ್ಲಿ ಸುರೇಶ್​ ಅಂಗಡಿ ಕುಟುಂಬಕ್ಕೆ ಟಿಕೆಟ್​ ನೀಡದಿದ್ದರೆ ನನ್ನ ತಮ್ಮ ರಮೇಶ್​ಗೆ ಟಿಕೆಟ್​ ನೀಡಿ ಎಂದು ಸಚಿವ ಉಮೇಶ್ ಕತ್ತಿ ಬೇಡಿಕೆ ಇಟ್ಟಿದ್ದಾರೆ.

ಸಹೋದರನ ಪರ‌ ಸಚಿವ ಉಮೇಶ್ ಕತ್ತಿ ಬ್ಯಾಟಿಂಗ್

ನಗರದಲ್ಲಿ ಮಾತನಾಡಿದ ಅವರು ಹಿಂದೊಮ್ಮೆ ಚಿಕ್ಕೋಡಿ ಲೋಕಸಭೆಯಿಂದ ಗೆದ್ದು ರಮೇಶ್ ಕತ್ತಿ ಕೆಲಸ ಮಾಡಿ ತೋರಿಸಿದ್ದಾರೆ. ಬಳಿಕ ಟಿಕೆಟ್ ವಂಚಿತರಾಗಿ ಮಾಜಿ ಸಂಸದರಾಗಿದ್ದಾರೆ. ದಿ. ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ರಮೇಶ್ ಕತ್ತಿಗೆ ಟಿಕೆಟ್ ಕೇಳಲ್ಲ ಎಂದರು.

ನಾನು ಕರ್ನಾಟಕ ರಾಜ್ಯದ ಮಂತ್ರಿ. 30 ಜಿಲ್ಲೆಗಳಲ್ಲಿ ಯಾವುದಾದರೂ ಉಸ್ತುವಾರಿ ಕೊಟ್ಟರೆ ನಿಭಾಯಿಸುವೆ. ಕೊಡದಿದ್ರೆ ನನ್ನ ಖಾತೆಯನ್ನು ನಿಭಾಯಿಸುತ್ತೇನೆ. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ವಿಶೇಷ ಜವಾಬ್ದಾರಿ. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಳ್ಳೆಯ ಆಡಳಿತ ಕೊಡುತ್ತಿದೆ ಎಂದ ಉಮೇಶ್ ಕತ್ತಿ, ಸಿಡಿ ಬಾಂಬ್ ಸಿಡಿಸಿದ್ದ ಬಸನಗೌಡ ಪಾಟೀಲ ಯತ್ನಾಳ್ ತಣ್ಣಗಾದ ವಿಚಾರಕ್ಕೆ ಯತ್ನಾಳರನ್ನೇ ಕೇಳೋದು ಒಳ್ಳೆಯದು ಎಂದರು.

ABOUT THE AUTHOR

...view details