ಕರ್ನಾಟಕ

karnataka

ETV Bharat / state

ಬೆಳಗಾವಿ ಜಿಲ್ಲಾ ಉಸ್ತುವಾರಿಗೆ ಕತ್ತಿ ಟವೆಲ್.. ಹುಬ್ಬಳ್ಳಿಯವರೇನು ಪಾಕಿಸ್ತಾನದವರಾ ಅಂತಾ ಕೇಳಿದ ಸಚಿವ - ಬೆಳಗಾವಿ ಲೋಕಸಭಾ ಉಪಚುನಾವಣೆ

ಜವಾಬ್ದಾರಿ ಕೊಟ್ಟರೆ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿ ಮಾಡುತ್ತೇನೆ. ಈ ಚುನಾವಣೆಯಲ್ಲಿಯೂ ನನ್ನ ನೇತೃತ್ವವೂ ಇದೆ. ಅದರ ಜೊತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವ ಕೂಡ ಇದ್ದೇ ಇರುತ್ತದೆ..

minister Umesh katti
ಸಚಿವ ಉಮೇಶ್​​​​ ಕತ್ತಿ

By

Published : Apr 3, 2021, 6:19 PM IST

ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಉಸ್ತುವಾರಿ ಹುಬ್ಬಳ್ಳಿಯವರ ಕೈಯಲ್ಲಿದೆ ಎಂಬ ಕಾರ್ಯಕರ್ತರ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಉಮೇಶ್ ಕತ್ತಿ, ಹುಬ್ಬಳ್ಳಿ ಧಾರವಾಡದ ನಾಯಕರೇನು ಪಾಕಿಸ್ತಾನದವರೇ? ಅವರು ನಮ್ಮ ಪಕ್ಕದ ಜಿಲ್ಲೆಯವರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಚುನಾವಣೆ ಮಾಡುತ್ತಿದ್ದೇವೆ. ಅಭಿವೃದ್ಧಿ ಮಾಡುವಾಗ ಅಭಿವೃದ್ಧಿ ಮಾಡೋಣ ಎಂದರು.

ಜವಾಬ್ದಾರಿ ಕೊಟ್ಟರೆ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿ ಮಾಡುತ್ತೇನೆ. ಈ ಚುನಾವಣೆಯಲ್ಲಿಯೂ ನನ್ನ ನೇತೃತ್ವವೂ ಇದೆ. ಅದರ ಜೊತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವ ಕೂಡ ಇದ್ದೇ ಇರುತ್ತದೆ. ನಾವು 5 ಲಕ್ಷ ಮತಗಳ ಅಂತರದಿಂದ ಜಯದಾಖಲಿಸಲಿದ್ದೇವೆ ಎಂದರು.

ಪದೇಪದೇ ಸಿಎಂ ಬಿಎಸ್‌ವೈ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ವಿಚಾರವನ್ನು ಹೈಕಮಾಂಡ್ ನಾಯಕರು ಸೂಕ್ಷ್ಮತೆಯಿಂದ ಗಮನಿಸುತ್ತಿದ್ದಾರೆ. ಎಲ್ಲವನ್ನೂ ಸರಿ ಮಾಡಿಕೊಂಡು ಹೋಗುತ್ತಾರೆಂಬುದು ನನ್ನ ಅನಿಸಿಕೆ.

ಯತ್ನಾಳ್ ಹೇಳಿಕೆ ಈ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಹೈಕಮಾಂಡ್ ಎಲ್ಲವನ್ನೂ ನೋಡುತ್ತಾರೆ. ಕ್ರಮ ಕೈಗೊಳ್ಳಬೇಕೋ ಬೇಡವೋ ಎಂಬ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದಿದ್ದಾರೆ.

ಇದನ್ನೂ ಓದಿ:ವನು ಉಂಡ ಮನೆಗೇ ದ್ರೋಹ ಬಗೆಯುವವನು,ಯತ್ನಾಳ್ ಅತ್ಯಂತ ನಾಲಾಯಕ್ ರಾಜಕಾರಣಿ.. ಸಚಿವ ನಿರಾಣಿ ವಾಗ್ದಾಳಿ

ABOUT THE AUTHOR

...view details