ಬೆಳಗಾವಿ:ಎಸ್‌ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ ಎಂಬ ಸಿಡಿ ಲೇಡಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಶ್ರೀಮಂತ ಪಾಟೀಲ ನಮ್ಮ ಪೊಲೀಸರು ಪಾರದರ್ಶಕ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಎಸ್ಐಟಿ ತನಿಖೆ ಮೇಲೆ ನಂಬಿಕೆ ಇಡಬೇಕಾಗುತ್ತದೆ ಎಂದು ಹೇಳಿದರು.
ಎಸ್ಐಟಿ ತನಿಖೆ ಮೇಲೆ ನಂಬಿಕೆ ಇಡಬೇಕಾಗುತ್ತದೆ: ಶ್ರೀಮಂತ ಪಾಟೀಲ - Minister Srimantha Patila
ಸಿಡಿ ಪ್ರಕರಣದಿಂದ ನಮ್ಮ ಪಕ್ಷಕ್ಕೆ ಏನೂ ಹಾನಿ ಇಲ್ಲ. ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಸಚಿವ ಶ್ರೀಮಂತ ಪಾಟೀಲ ಬೆಳಗಾವಿಯಲ್ಲಿ ಹೇಳಿದ್ದಾರೆ.
ಸಚಿವ ಶ್ರೀಮಂತ ಪಾಟೀಲ
ಬೆಳಗಾವಿ ಪಟ್ಟಣದ ಯುಕೆ 27 ಹೊಟೇಲ್‌ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣ ಬಿಜೆಪಿಗೆ ಮೈನಸ್ ಆಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಿಡಿ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ನಾವು ಪಕ್ಷದಿಂದ ಏನೂ ಕೆಲಸ ಮಾಡಿದ್ದೇವೆ, ನಮ್ಮ ಸರ್ಕಾರ ಏನು ಕಾರ್ಯಕ್ರಮ ಕೊಟ್ಟಿದೆ ಅದರ ಮೇಲೆ ಚುನಾವಣೆ ನಡೆಯುತ್ತೆ ಎಂದರು.
ಸಿಡಿ ಪ್ರಕರಣದಿಂದ ನಮ್ಮ ಪಕ್ಷಕ್ಕೆ ಏನೂ ಹಾನಿ ಇಲ್ಲ. ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ನಾವು ಈಗಾಗಲೇ ಪ್ರಚಾರ ಆರಂಭಿಸಿದ್ದೇವೆ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದರು.