ಕರ್ನಾಟಕ

karnataka

ETV Bharat / state

ಸ್ಲಮ್ ಬೋರ್ಡ್ ಅಧ್ಯಕ್ಷರಾದ ನಂತರ ಅಥಣಿಗೆ ಆಗಮಿಸಿದ ಮಹೇಶ್ ಕುಮಟಳ್ಳಿ

ಕೊಳಚೆ ನಿರ್ಮೂಲನೆ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಕ್ಷೇತ್ರದ ಜನರಿಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಧನ್ಯವಾದ ತಿಳಿಸಿದ್ದಾರೆ.

Mahesh Kumatalli
ಅಥಣಿಗೆ ಆಗಮಿಸಿದ ಮಹೇಶ್ ಕುಮಟಳ್ಳಿ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

By

Published : Jun 4, 2020, 5:09 PM IST

ಅಥಣಿ:ಕೊಳಚೆ ನಿರ್ಮೂಲನೆ ನಿಗಮ ಮಂಡಳಿ (ಸ್ಲಮ್ ಬೋರ್ಡ್) ಅಧ್ಯಕ್ಷರಾಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಅಥಣಿಗೆ ಆಗಮಿಸಿದ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಅಭಿಮಾನಿಗಳು ಪ್ರವಾಸಿ ಮಂದಿರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, ಸ್ಲಮ್ ಬೋರ್ಡ್ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಜನತೆಗೆ ಹಾಗೂ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕೊಟ್ಟಿದ್ದಕ್ಕೆ ರಾಜ್ಯ ನಾಯಕರಿಗೆ ಮತ್ತೊಮ್ಮೆ ಧನ್ಯವಾದ ಸಲ್ಲಿಸುತ್ತೇನೆ. ಇನ್ನು ಸರ್ಕಾರ ಪೂರ್ಣ ಅವಧಿ ಪೂರೈಸಲಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಸಚಿವ ಸ್ಥಾನಕ್ಕಿಂತಲೂ ನಿಗಮ ಸ್ಥಾನ ತೃಪ್ತಿ ತಂದಿದೆ. ಕಸದಿಂದ ರಸ ತೆಗೆದು ತೋರಿಸುತ್ತೇನೆ. ಈ ನಿಗಮದಿಂದ ಹಲವಾರು ಯೋಜನೆಗಳನ್ನು ರೂಪಿಸಲು ಅಧಿಕಾರಿಗಳ ಜೊತೆ ನಿನ್ನೆ ಒಂದು ಹಂತದ ಸಭೆ ನಡೆಸಿದ್ದೇನೆ. ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ನಮಗೆ ಯಾವುದೇ ವೈಮನಸ್ಸು ಇಲ್ಲ. ಅಥಣಿ ಭಾಗಕ್ಕೆ ಜಲಸಂಪನ್ಮೂಲ ಸಚಿವರು ಹಲವಾರು ಯೋಜನೆ ನೀಡಿದ್ದಾರೆ. ಇದುವರೆಗೆ ಅಥಣಿ ತಾಲೂಕಿಗೆ 1,200 ಕೋಟಿ ರೂ ನೀಡಿದ್ದಾರೆ. ಮುಂದೆ ಕೂಡ ಅಥಣಿ ಭಾಗಕ್ಕೆ ವಿಶೇಷ ಯೋಜನೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details