ಕರ್ನಾಟಕ

karnataka

ETV Bharat / state

ಕರ್ನಾಟಕ ಸೇರಲು ಮಹಾರಾಷ್ಟ್ರ ಸಿಂಧೂರು ಗ್ರಾಮಸ್ಥರ ಒಲವು: ಗ್ರಾಪಂನಲ್ಲಿ ಠರಾವು ಪಾಸ್​​ಗೆ ನಿರ್ಧಾರ - ಮೂಲ ಸೌಕರ್ಯ ಕಲ್ಪಿಸಲು ವಿಫಲ

ಕರ್ನಾಟಕ ಮಹಾರಾಷ್ಟ್ರ ಭಾಷಾವಾರು ರಾಜ್ಯ ವಿಂಗಡಣೆ ಸಂದರ್ಭದಲ್ಲಿ ಕನ್ನಡಿಗರಾದ ನಮಗೆ ಅನ್ಯಾಯವಾಗಿದೆ. ಮಹಾ ಸರ್ಕಾರ ಮೂಲ ಸೌಕರ್ಯ ಕಲ್ಪಿಸಲು ವಿಫಲವಾಗಿದೆ. ಕರ್ನಾಟಕ ರಾಜ್ಯ ಸೇರಲು ನಾವೆಲ್ಲ ಉತ್ಸುಕರಾಗಿದ್ದೇವೆ ಎಂದು ಸಿಂಧೂರ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Maharashtra Sindhuru Villagers
ಮಹಾರಾಷ್ಟ್ರ ಸಿಂಧೂರು ಗ್ರಾಮಸ್ಥರು

By

Published : Dec 2, 2022, 7:17 PM IST

Updated : Dec 2, 2022, 9:42 PM IST

ಚಿಕ್ಕೋಡಿ(ಬೆಳಗಾವಿ):ಕರ್ನಾಟಕ ಮಹಾರಾಷ್ಟ್ರ ಭಾಷಾವಾರು ರಾಜ್ಯ ಹಂಚಿಕೆ ಸಂದರ್ಭದಲ್ಲಿ ಕನ್ನಡಿಗರಾದ ನಮಗೆ ಅನ್ಯಾಯವಾಗಿದೆ. ಮಹಾ ಸರ್ಕಾರ ನಮಗೆ ಮೂಲ ಸೌಕರ್ಯ ಕಲ್ಪಿಸಲು ವಿಫಲವಾಗಿದೆ. ಕರ್ನಾಟಕ ರಾಜ್ಯ ಸೇರಲು ನಾವೆಲ್ಲ ಉತ್ಸುಕರಾಗಿದ್ದೇವೆ ಎಂದು ಸಿಂಧೂರ ಗ್ರಾಮಸ್ಥರು ಹೇಳಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಜತ್ತ ತಾಲೂಕು ಸಿಂಧೂರ ಗ್ರಾಮಸ್ಥರು, ಮಹಾರಾಷ್ಟ್ರ ಸರ್ಕಾರ ವಿರುದ್ಧ ಧ್ವನಿ ಎತ್ತಿದ್ದು, ಕರ್ನಾಟಕ ರಾಜ್ಯಕ್ಕೆ ಬರುವ ಒಲವು ತೋರುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ನಮಗೆ ಮೂಲ ಸೌಕರ್ಯ ನೀಡದಿದ್ದರೆ ಸಿಂಧೂರು ಗ್ರಾಮಸ್ಥರು ಒಟ್ಟಾಗಿ ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸು ಮಾಡಲಾಗುವುದು ಮತ್ತು ಕರ್ನಾಟಕ ಸೇರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.

ಸಿಂಧೂರ ಗ್ರಾಮ ಅಥಣಿ ತಾಲೂಕು ಕೋಹಳ್ಳಿ ಗ್ರಾಮವನ್ನು ಗಡಿ ಹಂಚಿಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಸಿಂಧೂರು ಲಕ್ಷ್ಮಣ ಹುಟ್ಟೂರಾದ ಸಿಂಧೂರು ಗ್ರಾಮಸ್ಥರು ಸದ್ಯ ಮಹಾರಾಷ್ಟ್ರ ಸರ್ಕಾರ ವಿರುದ್ಧ ಧ್ವನಿಯೆತ್ತಿ ತಮ್ಮ ಬೇಡಿಕೆ ಮುನ್ನೆಲೆಗೆ ತಂದಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮ್ಮ ಗ್ರಾಮಕ್ಕೆ ಬರುವಂತೆ ಕನ್ನಡಿಗರು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಸೇರಲು ಮಹಾರಾಷ್ಟ್ರ ಸಿಂಧೂರು ಗ್ರಾಮಸ್ಥರ ಒಲವು

ಇದನ್ನೂ ಓದಿ:ಕನ್ನಡಿಗರ ಅಭಿವೃದ್ಧಿ, ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಬಸವರಾಜ್ ಬೊಮ್ಮಾಯಿ

Last Updated : Dec 2, 2022, 9:42 PM IST

ABOUT THE AUTHOR

...view details