ಕರ್ನಾಟಕ

karnataka

ETV Bharat / state

ಏರಿಕೆಯಾಗುತ್ತಿದೆ ಕೃಷ್ಣಾ ನದಿ ನೀರಿನ ಮಟ್ಟ: ತಾಲೂಕಿನ 37 ಗ್ರಾಮಗಳಲ್ಲಿ ಮುಂಜಾಗೃತ ಕ್ರಮ - ಎಸ್​ಡಿಆರ್​ಎಫ್​ ತಂಡ

ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು... ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಗ್ರಾಮಗಳಲ್ಲಿ ಮುನ್ನಚ್ಚರಿಕೆ ನೀಡಿದ ಜಿಲ್ಲಾಡಳಿತ

ಕೃಷ್ಣಾ ನದಿನ ನೀರಿನ ಹರಿವು ಹೆಚ್ಚಳ

By

Published : Aug 3, 2019, 1:44 PM IST

ಬೆಳಗಾವಿ: ಚಿಕ್ಕೋಡಿ ತಾಲೂಕಿನ 37 ಗ್ರಾಮಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಕೃಷ್ಣಾ ನದಿಯ ನೀರಿನ‌ ಮಟ್ಟ ಏರಿಕೆಯಿಂದಾಗಿ ನಡುಗಡ್ಡೆಗಳಲ್ಲಿ‌ ಸಿಲುಕಿರುವ ಕುಟುಂಬಗಳನ್ನು ರಕ್ಷಿಸಲು‌ ಎಸ್​ಡಿಆರ್​ಎಫ್ ತಂಡ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಬೀಡು ಬಿಟ್ಟಿದೆ.

ಕೃಷ್ಣಾ ನದಿನ ನೀರಿನ ಹರಿವು ಹೆಚ್ಚಳ

ಬೋಟ್ ಮೂಲಕ ಕಾರ್ಯಾಚರಣೆಗೆ ಮುಂದಾಗಿರುವ ಎಸ್​ಡಿಆರ್​ಎಫ್​​ ತಂಡ 100ಕ್ಕೂ ಹೆಚ್ಚು ಕುಟುಂಬಗಳ ರಕ್ಷಣಾ ಕಾರ್ಯವನ್ನು ನಡೆಸಿದೆ.

ಸುಮಾರು 200 ಮೀಟರ್ ನಷ್ಟು ನೀರು ನಡು ರಸ್ತೆಯಲ್ಲಿ ನಿಂತಿದ್ದು. ಸಂಪೂರ್ಣವಾಗಿ ಈ ಭಾಗದ ಜನರ ಜೀವನ ಅಸ್ತವ್ಯಸ್ತಗೊಂಡಿದೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಡ್ಯಾಂ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಕೋಯ್ನಾ ಜಲಾಶಯ ಶೇ 88 ರಷ್ಟು ಭರ್ತಿಯಾಗಿದೆ. ಶನಿವಾರ ಮಧ್ಯಾಹ್ನ ಹೆಚ್ಚುವರಿ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕೃಷ್ಣಾ ನದಿಯ ತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ, ಉನ್ನತ ಅಧಿಕಾರಿಗಳು ಮುಂಜಾಗೃತ ಕ್ರಮಕ್ಕೆ ಮುಂದಾಗಿದ್ದಾರೆ.

ABOUT THE AUTHOR

...view details