ಬೆಳಗಾವಿ: ಶಾಹೀನ್ ಭಾಗದಲ್ಲಿ ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.
ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ - ಬೆಳಗಾವಿ ಪ್ರತಿಭಟನೆ ಸುದ್ದಿ
ಶಾಹೀನ್ ಭಾಗದಲ್ಲಿ ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾಹೀನ್ ಭಾಗದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ 2019ರ ಡಿ. 15.ರಿಂದ ಧರಣಿ ನಡೆಸಿದ್ದ ಜೆಎನ್ಯುನ ಹಳೆ ವಿದ್ಯಾರ್ಥಿವೋರ್ವ ಬಹಿರಂಗವಾಗಿಯೇ ಅಸ್ಸೋಂ ಅನ್ನು ಭಾರತದಿಂದ ವಿಭಾಗಿಸುವುದೇ ತಮ್ಮ ಉದ್ದೇಶವೆಂದು ಪ್ರಚೋದನೆಕಾರಿ ಹೇಳಿಕೆ ನೀಡುತ್ತಿದ್ದಾನೆ. ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಡಿಸಿಗೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಮನವಿ ಸಲ್ಲಿಸಿದರು.
ದೇಶ ಹಾಗೂ ಸಮಾಜ ವಿರುದ್ಧ ಭಾಷಣ ಮಾಡುವ ಮುಖಂಡರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೇ ಪಿಎಫ್ ಐ ಸಂಘಟನೆಗೆ ನಿರ್ಬಂಧ ಹೇರಬೇಕೆಂದು ಹಿಂದೂ ಜನಜಾಗೃತಿ ಸಂಘಟನೆಯ ಮುಖಂಡ ರಿಷಿಕೇಶ್ ಗುರ್ಜರ್ ಒತ್ತಾಯಿಸಿದರು.