ಬೆಳಗಾವಿ: ವಾಯುವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಎರಡನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. 34,693 ಮತಗಳ ಅಂತರದಿಂದ ನಿರಾಣಿ ಅಮೋಘ ಜಯ ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ್ ಹೀನಾಯ ಸೋಲನುಭವಿಸಿದ್ದಾರೆ.
ಹಣಮಂತ ನಿರಾಣಿ ಒಟ್ಟು 44,815 ಮತ ಪಡೆದರೆ, ಸುನೀಲ್ ಸಂಕ್ ಕೇವಲ 10,122 ಮತ ಪಡೆದರು. ಈ ಮೂಲಕ ಭಾರೀ ಅಂತರರಿಂದ ನಿರಾಣಿ ಸತತ ಎರಡನೇ ಭಾರಿ ಜಯಭೇರಿ ಬಾರಿಸಿದರು. ಇನ್ನು ಒಟ್ಟು 9006 ಮತಗಳು ತಿರಸ್ಕೃತಗೊಂಡಿವೆ. ಆರಂಭದಿಂದಲೂ ನಿರಾಣಿ ಮುನ್ನೆಡೆ ಸಾಧಿಸಿದ್ದರು. ಮತ ಎಣಿಕೆ ವಿಳಂಬವಾದ ಹಿನ್ನೆಲೆಯಲ್ಲಿ ಫಲಿತಾಂಶ ತಡರಾತ್ರಿ ಪ್ರಕಟಗೊಂಡಿತು.