ಕರ್ನಾಟಕ

karnataka

ETV Bharat / state

ಶಾಸಕ ಮಹೇಶ್ ಕುಮಟಳ್ಳಿ ಕಾಣೆಯಾಗಿದ್ದಾರೆ: ಗಜಾನನ ಮಂಗಸೂಳಿ - corona news in athani

ಅಥಣಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕಾಂಗ್ರೆಸ್​ ಮುಖಂಡ ಗಜಾನನ ಮಂಗಸೂಳಿ, ಶಾಸಕ ಮಹೇಶ್​ ಕುಮಟಳ್ಳಿ ಕಾಣೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

gajanana-mangasooli
ಗಜಾನನ ಮಂಗಸೂಳಿ

By

Published : Apr 22, 2020, 5:19 PM IST

ಅಥಣಿ : ಅಥಣಿ ಶಾಸಕರು ಕೊರೊನಾ ವೈರಸ್​ಗೆ ಹೆದರಿ ಕ್ಷೇತ್ರದಿಂದ ಪರಾರಿಯಾಗಿದ್ದಾರೆ. ಧೈರ್ಯ ಹೇಳಬೇಕಾದ ಶಾಸಕರೇ ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ ಎಂದು ಮಹೇಶ್​ ಕುಮಟಳ್ಳಿ ವಿರುದ್ಧ ಕಾಂಗ್ರೆಸ್​ ಮುಖಂಡ ಗಜಾನನ ಮಂಗಸೂಳಿ ಆರೋಪ ಮಾಡಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಕಾಣೆಯಾಗಿದ್ದಾರೆ. ಕೋವಿಡ್-19ಗೆ ಹೆದರಿ ಕ್ಷೇತ್ರದ ಜನರನ್ನು ಮರೆತಿದ್ದಾರೆ. ಎಷ್ಟೊಂದು ಸಂಘ ಸಂಸ್ಥೆಗಳು, ಜನಸಾಮಾನ್ಯರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಅಂತಹವರಿಗೂ ಹೇಳಬಾರದ್ದು ಹೇಳಿ ಸಹಾಯ ಮಾಡಲು ಬಿಡುತ್ತಿಲ್ಲ. ಕುಮಟಳ್ಳಿಗೆ ಕೊಡುವ ಯೋಗ್ಯತೆ ಇಲ್ಲ, ಕೊಡವರನ್ನೂ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಜಾನನ ಮಂಗಸೂಳಿ

ಕ್ಷೇತ್ರದ ಜನರಿಗೆ ಶಾಸಕರು ಮಾದರಿಯಾಗಬೇಕು. ಕೃಷ್ಣಾ ನದಿ ಪ್ರವಾಹ ಸಮಯದಲ್ಲಿ ನೆರೆ ಸಂತ್ರಸ್ತರಿಗೆ ಯಾವುದೇ ಸಹಾಯ ಮಾಡಲಿಲ್ಲ. ಇದೀಗ ಜನರ ಜೊತೆಯಲ್ಲಿದ್ದು ಜಾಗೃತಿ ಮೂಡಿಸಬೇಕಾದ ಸಂದರ್ಭದಲ್ಲಿ ಕ್ಷೇತ್ರದಿಂದ ಕಾಣೆಯಾಗಿದ್ದಾರೆ ಎಂದು ಆರೋಪ ಮಾಡಿದರು.

ABOUT THE AUTHOR

...view details