ಕರ್ನಾಟಕ

karnataka

ETV Bharat / state

ಬೆಳಗಾವಿ: ಬಡ ಸೋಂಕಿತರಿಗಾಗಿ ಉಚಿತ ಆಂಬುಲೆನ್ಸ್ ಸೇವೆ

ಕೊರೊನಾ ಸೋಂಕಿಗೆ ಬಲಿಯಾದ ಬಡ ರೋಗಿಗಳ ಮೃತದೇಹವನ್ನು ಅಂತ್ಯಸಂಸ್ಕಾರ ಹಾಗೂ ಸೋಂಕಿಗೆ ತುತ್ತಾದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗಲಿ ಎಂದು ಎರಡು ಫೌಂಡೇಶನ್​​ಗಳು ಉಚಿತವಾಗಿ ಆ್ಯಂಬುಲೆನ್ಸ್​​​​ ಸೇವೆ ಒದಗಿಸುತ್ತಿವೆ.

free ambulance service
ಹೆಲ್ಫ್ ಫಾರ್ ನೀಡಿ ಫೌಂಡೇಶನ್

By

Published : Sep 24, 2020, 3:52 PM IST

ಬೆಳಗಾವಿ: ಕೊರೊನಾ ಮತ್ತು ಕೋವಿಡೇತರ ರೋಗಗಳಿಂದ ಮೃತಪಡುತ್ತಿರುವ ರೋಗಿಗಳ ಮೃತದೇಹವನ್ನು ಸಾಗಿಸಲು ಬೆಳಗಾವಿಯ ಹೆಲ್ಪ್​ ಫಾರ್ ನೀಡಿ ಫೌಂಡೇಶನ್ ಹಾಗೂ ಸುಳಗಾ ಗ್ರಾಮದ ಜೀವನ ಸಂಘರ್ಷ ಫೌಂಡೇಶನ್ ಉಚಿತ ಆ್ಯಂಬುಲೆನ್ಸ್ ಸೇವೆ ಆರಂಭಿಸಿವೆ.

ಸಾಕಷ್ಟು ಬಡ ರೋಗಿಗಳು ಆ್ಯಂಬುಲೆನ್ಸ್ ಸೇವೆ ಪಡೆಯುತ್ತಿದ್ದು, ಫೌಂಡೇಶನ್‍ಗಳ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ಸಾರ್ವಜನಿಕ ಸ್ಥಳ ಹಾಗೂ ಆ್ಯಂಬುಲೆನ್ಸ್ ಮೇಲೆ ಮೊಬೈಲ್​​​ ನಂಬರ್ ಬರೆಯಲಾಗಿದ್ದು, ಅಗತ್ಯ ಬಿದ್ದವರು ಚಾಲಕರನ್ನು ಸಂಪರ್ಕಿಸಿ ಈ ಸೇವೆ ಪಡೆಯಬಹುದು.

2 ಅಮಾನವೀಯ ಘಟನೆಗಳು:ಜಿಲ್ಲೆಯಲ್ಲಿ ಆ್ಯಂಬುಲೆನ್ಸ್​​ಗಳ ಕೊರತೆ ಎದುರಾಗಿದ್ದು, ಅವುಗಳ ಸೇವೆ ಸಿಗದ ಕಾರಣ ಕೊರೊನಾದಿಂದ ಬಲಿಯಾದ ವ್ಯಕ್ತಿಯನ್ನು ಅಥಣಿಯಲ್ಲಿ ತಳ್ಳುವ ಗಾಡಿಯ ಮೂಲಕ, ಇನ್ನೊಂದೆಡೆ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿಯಲ್ಲಿ ಸೈಕಲ್ ಮೇಲೆ ಸೋಂಕಿತನ ಶವ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಲಾಗಿತ್ತು. ಈ ಎರಡೂ ಅಮಾನವೀಯತೆ ಘಟನೆಗಳು ರಾಜ್ಯಾದ್ಯಂತ ಸುದ್ದಿಯಾಗಿದ್ದವು. ಅಲ್ಲದೆ, ಸರ್ಕಾರದ ವಿರುದ್ಧ ಆಕ್ರೋಶ ಕೇಳಿಬಂದಿತ್ತು.

ಸ್ಥಳೀಯರ ಸಮಸ್ಯೆ ಅರಿತ ಹೆಲ್ಫ್ ಫಾರ್ ನೀಡಿ ಫೌಂಡೇಶನ್ ಎರಡು ಹಾಗೂ ಜೀವನ ಸಂಘರ್ಷ ಫೌಂಡೇಶನ್ ಒಂದು ಆ್ಯಂಬುಲೆನ್ಸ್ ನೀಡಿವೆ. ಈ ಎರಡೂ ಫೌಂಡೇಶನ್‍ಗಳು ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸಿವೆ. ಕ್ವಾರಂಟೈನ್ ಕೇಂದ್ರಗಳಲ್ಲಿ ನೈರ್ಮಲ್ಯೀಕರಣ, ಕೊರೊನಾ ವಾರಿಯರ್ಸ್‍ಗೆ ಮಾಸ್ಕ್ ವಿತರಣೆ ಸೇರಿದಂತೆ ಹಲವು ಸಮಾಜ ಸೇವೆ ಕಾರ್ಯಗಳನ್ನು ಮಾಡಿದೆ.

ಉಚಿತ ಆಂಬುಲೆನ್ಸ್ ಸೇವೆ

ಈ ಕುರಿತು ಈಟಿವಿ ಭಾರತ ಜೊತೆಗೆ ಹೆಲ್ಫ್ ಫಾರ್ ನೀಡಿ ಫೌಂಡೇಶನ್ ಸಂಸ್ಥಾಪಕ ಸುರೇಂದ್ರ ಅನಗೋಳಕರ ಮಾತನಾಡಿ, ಆ್ಯಂಬುಲೆನ್ಸ್ ನೀಡುವಂತೆ ಗೋಕಾಕ್​​ ತಹಶೀಲ್ದಾರ್ ಪತ್ರ ಬರೆದಿದ್ದರು. ಬಡ ಸೋಂಕಿತರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಆ್ಯಂಬುಲೆನ್ಸ್ ಹಸ್ತಾಂತರಿಸಲಾಗಿದೆ. ತಾಲೂಕಾಡಳಿತವೇ ಅದರ ನಿರ್ವಹಣೆ ಮಾಡುತ್ತಿದೆ ಎಂದರು.

ABOUT THE AUTHOR

...view details