ಕರ್ನಾಟಕ

karnataka

ETV Bharat / state

ಕೊಲೆಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲು ಹಿಂದೇಟು... ಭೂ ಮಾಲೀಕನಿಗೆ ಧರ್ಮದೇಟು

ಹಣದ ವಿಚಾರವಾಗಿ ಕೊಲೆಯಾದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ‌ತನ್ನ ಜಮೀನಿನಲ್ಲಿ ಮಾಡಬೇಡಿ ಎಂದು ಪಟ್ಟು ಹಿಡಿದಿದ್ದ ಜಮೀನು ಮಾಲೀಕನಿಗೆ ಮೃತನ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿರುವ ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

Family members beaten
ಧರ್ಮದೇಟು

By

Published : Mar 19, 2020, 5:56 PM IST

ಬೆಳಗಾವಿ: ಕೊಲೆಯಾದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ‌ತನ್ನ ಜಮೀನಿನಲ್ಲಿ ಮಾಡಬೇಡಿ ಎಂದು ಪಟ್ಟು ಹಿಡಿದಿದ್ದ ಜಮೀನು ಮಾಲೀಕನಿಗೆ ಮೃತನ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದಲ್ಲಿ ನಡೆದಿದೆ.

ಅಂತ್ಯಸಂಸ್ಕಾರಕ್ಕೆ ಜಾಗ ನೀಡದ್ದಕ್ಕೆ ಜಮೀನು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿತ

ಭೂಮಿ ಮಾಲೀಕ ಯಮನಪ್ಪ ಪೂಜಾರಿ ಥಳಿತಕ್ಕೊಳಗಾಗಿರುವ ವ್ಯಕ್ತಿ. ಹಣದ ವಿಚಾರವಾಗಿ ಅದೇ ಗ್ರಾಮದ ಪ್ರಕಾಶ್​ ಬಡಕಲೂರ (26) ಎಂಬ ಯುವಕನನ್ನು ಕೊಲೆ ಮಾಡಿ ಸಾಕ್ಷಿ ಮುಚ್ಚಿ ಹಾಕಲು ಶವವನ್ನು ನೇಣಿಗೆ ಹಾಕಲಾಗಿತ್ತು. ಮೃತನ ಅಂತ್ಯಸಂಸ್ಕಾರಕ್ಕೆ ಭೂಮಿ ನೀಡದ್ದಕ್ಕೆ ಆತನ ಸಂಬಂಧಿ ಹಾಗೂ ದಲಿತ ಸಂಘಟನೆ ಕಾರ್ಯಕರ್ತರು ಸೇರಿಕೊಂಡು ಯಮನಪ್ಪನಿಗೆ ಥಳಿಸಿದ್ದಾರೆ.

ಘಟನೆ ವಿವರ:

ರಾಮದುರ್ಗ ತಾಲೂಕಿನ ತೋರನಗಟ್ಟಿ ಗ್ರಾಮದ ಬಸಪ್ಪ ಎಂಬುವರಿಗೆ ಸೇರಿದ ಜಮೀನನ್ನು ಪ್ರಕಾಶ್​ ಪಾಲಿನ ಆಧಾರದ ಮೇಲೆ ಉಳುಮೆ ಮಾಡುತ್ತಿದ್ದರು. ಇದಕ್ಕಾಗಿ ಬಸಪ್ಪ ಪ್ರಕಾಶನಿಂದ 10 ಲಕ್ಷ ರೂ. ಪಡೆದಿದ್ದ. ಹಲವು ಬಾರಿ ಪ್ರಕಾಶ್​ ಹಣ ನೀಡು ಇಲ್ಲವೇ ಜಮೀನನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಬಸಪ್ಪನಿಗೆ ಕೇಳಿದ್ದ ಎನ್ನಲಾಗ್ತಿದೆ. ಇದರಿಂದ ರೋಸಿ ಹೋಗಿದ್ದ ಬಸಪ್ಪ ತನ್ನ ಮಗನ ಜತೆಗೂಡಿ ಪ್ರಕಾಶನನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಸಾಕ್ಷಿ ಮುಚ್ಚಿಹಾಕಲು ಬಸಪ್ಪನ ಜಮೀನಿನ ಮನೆಯಲ್ಲೇ ಪ್ರಕಾಶನ ಶವವನ್ನು ನೇಣಿಗೆ ಹಾಕಲಾಗಿತ್ತು. ಈ ಸಂಬಂಧ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details