ಬೆಳಗಾವಿ: ಮಹಿಳಾ ಪಿಡಿಓಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ ಬೈಲಹೊಂಗಲ ತಾಲೂಕು ಪಂಚಾಯಿತಿ ಇಓ ವಿರುದ್ಧ ತನಿಖೆ ನಡೆಸಿ, ವಾರದೊಳಗೆ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸಚಿವ ಈಶ್ವರಪ್ಪ ಸೂಚನೆ ನೀಡಿದ್ದಾರೆ.
ಮಹಿಳಾ ಪಿಡಿಓಗಳ ಜತೆ ಇಓ ಅಸಭ್ಯ ವರ್ತನೆ: ವರದಿ ನೀಡುವಂತೆ ಈಶ್ವರಪ್ಪ ಸೂಚನೆ
ಬೈಲಹೊಂಗಲ ಇಒ ವಿರುದ್ಧ ದೂರು ಶೀರ್ಷಿಕೆಯಡಿ ಈಟಿವಿ ಭಾರತ ಇಂದು ಬೆಳಗ್ಗೆ ವರದಿ ಪ್ರಕಟಿಸಿತ್ತು. ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವ ಈಶ್ವರಪ್ಪನವರು ಈಟಿವಿ ಭಾರತ ವರದಿ ನೋಡಿ ತಕ್ಷಣವೇ ಸ್ಪಂದಿಸಿದ್ದಾರೆ. ಬೈಲಹೊಂಗಲ ಇಓ ಸಮೀರ್ ಮುಲ್ಲಾ ವಿರುದ್ಧ ತನಿಖೆ ನಡೆಸಬೇಕು. ವಾರದೊಳಗೆ ವರದಿ ನೀಡುವಂತೆ ಜಿಪಂ ಸಿಇಒ ಡಾ. ರಾಜೇಂದ್ರ ಅವರಿಗೆ ಸೂಚನೆ ನೀಡಿದರು.

ಬೈಲಹೊಂಗಲ ತಾ.ಪಂ. ಇಓ ಸಮೀರ್ ಮುಲ್ಲಾ ಅವರು ಮಹಿಳಾ ಪಿಡಿಓಗಳ ಜತೆಗೆ ಅಸಭ್ಯ ವರ್ತನೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿ.ಪಂ. ಸಿಇಓ ಡಾ. ರಾಜೇಂದ್ರ ಕೆ.ವಿ. ಅವರಿಗೆ ದೂರು ನೀಡಿದ್ದರು.