ಕರ್ನಾಟಕ

karnataka

ETV Bharat / state

ಹಿಂದೂ 'ಅಶ್ಲೀಲ' ಪದ ಹೇಳಿಕೆ: ಸತೀಶ್​ ಜಾರಕಿಹೊಳಿ ವಿರುದ್ಧ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ಕಿಡಿ! - ಜಾಗೋ ಹಿಂದೂ ಸಮಾವೇಶ

ಬೆಳಗಾವಿಯ ಕಡೋಲಿ ಗ್ರಾಮದಲ್ಲಿ ನಡೆದ ಜಾಗೋ ಹಿಂದೂ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ವಿರುದ್ಧ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ಧನಂಜಯ ಭಾಯ್ ದೇಸಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

dhananjay bhai desai
ಧನಂಜಯ ಭಾಯ್ ದೇಸಾಯಿ

By

Published : Dec 18, 2022, 10:49 AM IST

ಬೆಳಗಾವಿ: ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಹಲವಾರು ಲೇಖನಗಳಲ್ಲಿ ಹಿಂದೂ ಪದದ ಅರ್ಥವನ್ನು ಕೆಟ್ಟದಾಗಿ ಬಿಂಬಿಸಿದ್ದಾರೆಂದು ಈ ಹಿಂದೆ ವಿವಾದಿತ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ವಿರುದ್ಧ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ಧನಂಜಯ ಭಾಯ್ ದೇಸಾಯಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯ ಕಡೋಲಿ ಗ್ರಾಮದಲ್ಲಿ ಬಿಜೆಪಿ ವತಿಯಿಂದ ನಡೆದ ಜಾಗೋ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಸತೀಶ್​ ಜಾರಕಿಹೊಳಿಯವರು ಹಿಂದೂ ಪದವನ್ನು ಅಶ್ಲೀಲ ಎಂದು ಹೇಳಿದ್ದಾರೆ. ತಾವು ಹುಟ್ಟಿ ಬಂದ ತಾಯಿಯ ಗರ್ಭವನ್ನೇ ಅಶ್ಲೀಲ ಎನ್ನುವವರನ್ನು ವಿಧಾನಸಭೆಗೆ ಕಳುಹಿಸಬೇಡಿ. ಈ ಕುರಿತು ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಸಮಿತಿ ರಚಿಸಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ:ನನ್ನ ಹೇಳಿಕೆ ತಪ್ಪು ಅಂತಾ ಸಾಬೀತಾದ್ರೆ ರಾಜಕೀಯ ನಿವೃತ್ತಿಗೆ ಸಿದ್ಧ: ಬಿಜೆಪಿಗೆ ಸತೀಶ್ ಜಾರಕಿಹೊಳಿ ಸವಾಲು

ಇದೇ ವೇಳೆ ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆ ಬಗ್ಗೆ ಮಾತನಾಡಿ, ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಅದು ಭಾರತ್ ತೋಡೋ ಯಾತ್ರೆ. ಇದರಲ್ಲಿ ಭಾರತ ವಿರೋಧಿ ವ್ಯಕ್ತಿತ್ವ, ಇಸ್ಲಾಮಿಕ್, ಲವ್ ಜಿಹಾದ್, ಪಿಎಫ್ಐ ಬೆಂಬಲಿಸುವವರು ಭಾಗಿಯಾಗಿದ್ದಾರೆ ಎಂದರು.

ಇದನ್ನೂ ಓದಿ:ನನ್ನ ಹೇಳಿಕೆ ಹಿಂಪಡೆಯುತ್ತಿದ್ದೇನೆ.. ಸಿಎಂಗೆ ಪತ್ರ ಬರೆದ ಸತೀಶ್​ ಜಾರಕಿಹೊಳಿ

ABOUT THE AUTHOR

...view details