ಬೆಳಗಾವಿ:ಕೋವಿಡ್ ಸೋಂಕಿತ ಗರ್ಭಿಣಿಯರನ್ನು ದಿಢೀರ್ ಡಿಸ್ಚಾರ್ಜ್ ಮಾಡುವ ಮೂಲಕ ಬಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಮತ್ತೊಂದು ಮಹಾ ಎಡವಟ್ಟು ಮಾಡಿರುವ ಆರೋಪ ಕೇಳಿಬಂದಿದೆ. ಸೋಂಕಿತ ಗರ್ಭಿಣಿಯರ ಕುಟುಂಬಸ್ಥರು ಪರದಾಡುವಂತಾಗಿದೆ.
ಕೋವಿಡ್ ಸೋಂಕಿತ ಗರ್ಭಿಣಿಯರ ದಿಢೀರ್ ಡಿಸ್ಚಾರ್ಜ್: ಬಿಮ್ಸ್ ಆಸ್ಪತ್ರೆ ಎಡವಟ್ಟು - ಬೆಳಗಾವಿಯಲ್ಲಿ ಕೊರೊನಾ
ಕೋವಿಡ್ ಸೋಂಕಿತ ಗರ್ಭಿಣಿಯರನ್ನು ದಿಢೀರ್ ಡಿಸ್ಚಾರ್ಜ್ ಮಾಡುವ ಮೂಲಕ ಬಿಮ್ಸ್ ಆಸ್ಪತ್ರೆಯ ಮಹಾ ಎಡವಟ್ಟು ಮಾಡಿದ್ದು, ಗರ್ಭಿಣಿಯರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಪಾಸಿಟಿವ್ ಕಾರಣಕ್ಕೆ ಕೆಲವು ದಿನಗಳ ಹಿಂದೆ ಕೆಲವು ಗರ್ಭಿಣಿಯರನ್ನು ಕರೆತರಲಾಗಿದೆ. ಆಸ್ಪತ್ರೆಗೆ ಆಗಮಿಸಿ ಮೂರ್ನಾಲ್ಕು ದಿನಗಳು ಕಳೆದ ನಂತರ ಯಾವುದೇ ಕೋವಿಡ್ ಟೆಸ್ಟ್ ಮಾಡದೇ ಈಗ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಾತು ಕೇಳಿದ ಗರ್ಭಿಣಿಯರು ಹಾಗೂ ಅವರ ಕುಟುಂಬಸ್ಥರು ಕಂಗಾಲಾಗಿದ್ದು, ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಮ್ಸ್ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಮಂದಿ ಸೋಂಕಿತ ಗರ್ಭಿಣಿಯರಿದ್ದಾರೆ. ಇವರಲ್ಲಿ ಕೆಲವು ಗರ್ಭಿಣಿಯರನ್ನು ಕೆಲವು ದಿನಗಳ ಹಿಂದೆ ಕರೆತರಲಾಗಿತ್ತು. ಈಗ ಆ ಸೋಂಕಿತರಿಗೆ ಯಾವುದೇ ಸೋಂಕು ಪರೀಕ್ಷೆ ಮಾಡದೇ ಮನೆಗೆ ಹೋಗಲು ತಿಳಿಸಿದ್ದಾರೆ. ಈಗ ಗರ್ಭಿಣಿಯರ ಕುಟುಂಬಸ್ಥರು ಆರೋಗ್ಯದ ವರದಿ ನೀಡದೇ ಗರ್ಭಿಣಿಯರನ್ನು ಮನೆಗೆ ಕರೆದೊಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.