ಕರ್ನಾಟಕ

karnataka

ETV Bharat / state

ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ವೃದ್ಧ.. ಹತ್ತು ಲಕ್ಷ ಪರಿಹಾರ ಘೋಷಿಸಿದ ಸರ್ಕಾರ - ಜನ ಶುದ್ಧವಾದ ನೀರು ಕುಡಿಯಬೇಕು

ಬೊಮ್ಮಾಯಿ ಸರ್ಕಾರ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ಬೆಳಗಾವಿಯ ವೃದ್ಧನ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಿದೆ.

contaminated water consumed case  Ten lakh compensation to old man died family  Belagavi In charge Minister Govinda Karajola  ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ವೃದ್ಧ  ಹತ್ತು ಲಕ್ಷ ಪರಿಹಾರ ಘೋಷಿಸಿದ ಸರ್ಕಾರ  ಬೆಳಗಾವಿಯ ವೃದ್ಧನ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ  ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ  ರಾಮದುರ್ಗದಲ್ಲಿ ಹಲವಾರು ಜನರು ಅಸ್ವಸ್ಥ  ಜನ ಶುದ್ಧವಾದ ನೀರು ಕುಡಿಯಬೇಕು  ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕಾರಜೋಳ
ಹತ್ತು ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

By

Published : Oct 27, 2022, 1:21 PM IST

ಬೆಳಗಾವಿ: ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವೃದ್ಧನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರಿಗೆ ಹತ್ತು ಲಕ್ಷ ಪರಿಹಾರ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಕಲುಷಿತ ನೀರು ಸೇವಿಸಿ ರಾಮದುರ್ಗದಲ್ಲಿ ಹಲವಾರು ಜನರು ಅಸ್ವಸ್ಥರಾಗಿದ್ದಾರೆ. ಸದ್ಯಕ್ಕೆ ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಅಸ್ವಸ್ಥರ ಕುರಿತು ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಪಂಚಾಯತ್​ ಸಿಇಒ ಹಾಗೂ ಡಿಎಚ್ಒ ಅವರಿಗೆ ಸೂಚಿಸಿದ್ದೇನೆ ಎಂದರು.

ಹತ್ತು ಲಕ್ಷ ಪರಿಹಾರದ ಬಗ್ಗೆ ಸಚಿವ ಗೋವಿಂದ್​ ಕಾರಜೋಳ ಮಾಹಿತಿ

ಇನ್ನು, ಮುದೇನೂರ ಗ್ರಾಮದಲ್ಲಿ ಆರ್​ಓ ಪ್ಲಾಂಟ್ ಇದೆ. ಜನರು ಆರ್​ಓ ಪ್ಲಾಂಟ್ ನೀರನ್ನೇ ಕುಡಿಯಬೇಕು. ಸಿಎಂ ಜೊತೆ ಮಾತನಾಡಿ ಮೃತ ಶಿವಪ್ಪ ಕುಟುಂಬಕ್ಕೆ 10 ಲಕ್ಷ ಪರಿಹಾರ ಕೇಳಿದ್ದೇನೆ. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಇನ್ಮುಂದಾದರು ಜನ ಶುದ್ಧವಾದ ನೀರು ಕುಡಿಯಬೇಕು. ನಲ್ಲಿಗಳ ಮೂಲಕ ಶುದ್ದವಾದ ನೀರು ಕೊಡುವ ಪ್ರಯತ್ನ ಮಾಡುತ್ತೇವೆ. ಯಾವುದೇ ಕಾರಣಕ್ಕೆ ಮುದೇನೂರು ಜನರು ಪೈಪ್​ಲೈನ್ ಮತ್ತು ಬೋರವೆಲ್​ಗಳಿಂದ ಬರುವ ನೀರನ್ನು ಕುಡಿಯಬಾರದು ಎಂದು ಸಚಿವ ಕಾರಜೋಳ ಮನವಿ ಮಾಡಿದ್ದಾರೆ.

ಓದಿ:ಬೆಳಗಾವಿಯಲ್ಲಿ ಕಲುಷಿತ ನೀರು ಸೇವನೆ: ವೃದ್ಧ ಸಾವು, ನಾಲ್ವರು ಸ್ಥಿತಿ ಚಿಂತಾಜನಕ

ABOUT THE AUTHOR

...view details