ಕರ್ನಾಟಕ

karnataka

ETV Bharat / state

ಬೀಸುವ ಗಾಳಿ ತಡೆಯೋಕಾಗಲ್ಲಾ, ಉರಿಯೋ ಸೂರ್ಯನನ್ನು ನಂದಿಸೋಕಾಗಲ್ಲ: ಶಾಸಕಿ ಹೆಬ್ಬಾಳ್ಕರ್

ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಆ ಹೋರಾಟದ ರೂಪ ಬೆಂಕಿ ಹಚ್ಚಿ, ಕಲ್ಲು ತೂರಾಟ ಉದ್ವಿಗ್ನವಾಗಬಾರದಷ್ಟೇ. ಪ್ರತಿ ಟೋಲ್ ನಾಕಾಗಳಲ್ಲಿ ಜನರನ್ನು ತಡೆಯುತ್ತಿದ್ದಾರೆ. ಆದರೆ ಈ ರೀತಿ ಎಷ್ಟು ದಿನ ಮಾಡ್ತಾರೆ? ಬೀಸುವ ಗಾಳಿಯನ್ನು ಯಾರೂ ತಡೆಯೋಕಾಗಲ್ಲ, ಉರಿಯೋ ಸೂರ್ಯನನ್ನು ಯಾರೂ ನಂದಿಸಲು ಸಾಧ್ಯವಾಗಲ್ಲ ಎಂದು ಹೇಳುವ ಮೂಲಕ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಗ್ನಿಪಥ್​ ವಿರುದ್ಧದ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

Congress MLA Lakshmi Hebbalkar
ಶಾಸಕಿ ಹೆಬ್ಬಾಳ್ಕರ್ ಕಿಡಿ

By

Published : Jun 20, 2022, 3:24 PM IST

ಬೆಳಗಾವಿ:ಅಗ್ನಿಪಥ ವಿರೋಧಿಸಿ ಸೇನಾಕಾಂಕ್ಷಿಗಳು ನಡೆಸಲು ಉದ್ದೇಶಿಸಿದ್ದ ಬೆಳಗಾವಿ ಚಲೋ ಹತ್ತಿಕ್ಕಿದ ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರನ್ನು ಬೆಳಗಾವಿಗೆ ಬಾರದಂತೆ ತಡೆಹಿಡಿಯಲಾಗಿದೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಆ ಹೋರಾಟದ ರೂಪ ಬೆಂಕಿ ಹಚ್ಚಿ, ಕಲ್ಲು ತೂರಾಟ ಉದ್ವಿಗ್ನವಾಗಬಾರದಷ್ಟೇ. ಗಾಂಧೀಜಿಯವರು ಕಲಿಸಿ ಕೊಟ್ಟಂತಹ ಸತ್ಯಾಗ್ರಹ ಹೋರಾಟಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಬ್ಯಾರಿಕೇಡ್ ಹಾಕಿ ತಡೆ:ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಪ್ರತಿಭಟನೆ ಮೊದಲೇ ಗೊತ್ತಾಗಿರುವ ಕಾರಣಕ್ಕೆ ಪಥ ಸಂಚಲನ ಮಾಡಿ ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಪ್ರತಿ ಟೋಲ್ ನಾಕಾಗಳಲ್ಲಿ ಜನರನ್ನು ತಡೆಯುತ್ತಿದ್ದಾರೆ. ಆದರೆ ಈ ರೀತಿ ಎಷ್ಟು ದಿನ ಮಾಡ್ತಾರೆ? ಎಷ್ಟು ದಿನ ಹೋರಾಟ ತಡೆಯಕ್ಕಾಗುತ್ತದೆ. ಹೋರಾಟ ತಡೆಯಲು, ದಿಕ್ಕು ಬದಲಿಸಲು ಸಾಧ್ಯವಿಲ್ಲ. ಬೀಸುವ ಗಾಳಿಯನ್ನು ಯಾರೂ ತಡೆಯೋಕಾಗಲ್ಲ, ಉರಿಯೋ ಸೂರ್ಯನನ್ನು ಸಹ ಯಾರೂ ನಂದಿಸಲು ಸಾಧ್ಯವಾಗಲ್ಲ ಎಂದರು.

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಯೋಜನೆಯಲ್ಲಿ ಬದಲಾವಣೆ ಆಗಲಿ: ಉರಿಯುವ ಬೆಂಕಿಗೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯುವಕರನ್ನು, ಜನರನ್ನು ಎತ್ತಿ ಕಟ್ಟಿರುವ ರೂಢಿ ಬಿಜೆಪಿಯವರಿಗಿದೆ. ನಾನು ಅಗ್ನಿಪಥ ಯೋಜನೆ ವಿರುದ್ಧ ಇಲ್ಲ. ಯೋಜನೆಯಲ್ಲಿ ಬದಲಾವಣೆ ಆಗಬೇಕಿದೆ. ಎಂಟು ವರ್ಷದಲ್ಲಿ 16 ಕೋಟಿ ಕೆಲಸ ಕೊಡುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಬಳಿಕ ಪಕೋಡ ಮಾರಿ ಎಂದು ಹೇಳಿದರು. ಈಗ ಅಗ್ನಿಪಥದಲ್ಲಿ ಅಗ್ನಿ ವೀರರು ಅಂತಿದ್ದಾರೆ. ಇದೆಲ್ಲ ನೋಡಿದ್ರೆ ಏನನ್ನಬೇಕು ಎಂದು ಪ್ರಶ್ನಿಸಿದ್ರು.

ಜಾಬ್ ಸೆಕ್ಯೂರಿಟಿ ಬೇಕು:ಅಗ್ನಿವೀರ ಆಗಿ ನಾಲ್ಕು ವರ್ಷ ಆದ ಮೇಲೆ ಅವರ ಭವಿಷ್ಯ ಏನು? 75 ವರ್ಷದ ರಕ್ಷಣಾ ಸಚಿವರು, 71 ವರ್ಷದ ಪ್ರಧಾನಿಗೆ ರಿಟೈರ್‌ಮೆಂಟ್ ಇಲ್ಲ. ನಮ್ಮವರೇ 76 ವರ್ಷದ ಪ್ರಕಾಶ್ ಹುಕ್ಕೇರಿ ಎಂಎಲ್‌ಸಿ ಆಗಿದ್ದಾರೆ. 21 ಅಥವಾ 25 ವರ್ಷಕ್ಕೆ ರಿಟೈರ್‌ಮೆಂಟ್ ಯಾರಾದರೂ ಸಹಿಸಿಕೊಳ್ತಾರಾ? ಯಾವ ಯುವಕರ ತಂದೆ ತಾಯಿ ಸಹಿಸಿಕೊಳ್ತಾರೆ. ಅವರ ಜಾಬ್ ಸೆಕ್ಯೂರಿಟಿ ಇರಲಿ ಅನ್ನೋದು ನನ್ನ ಅಭಿಪ್ರಾಯ. ಯಾವುದೇ ಯೋಜನೆ ಇರಲಿ ಪರ ವಿರೋಧ ಇರುತ್ತದೆ. ಅದನ್ನ ಸುಧಾರಿಸಿಕೊಂಡು ಮಾಡಲಿ ಅನ್ನೋದು ನನ್ನ ಅಭಿಪ್ರಾಯ ಎಂದು ಹೆಬ್ಬಾಳ್ಕರ್​ ತಿಳಿಸಿದರು.

ಇದನ್ನೂ ಓದಿ:ಅಗ್ನಿಪಥ್​ ಕಿಚ್ಚು.. ಬೆಳಗಾವಿಯಲ್ಲಿ ಪ್ರತಿಭಟನೆಗೆ ಬಂದ ನೂರಾರು ಯುವಕರು ದೇವಸ್ಥಾನದಲ್ಲಿ ಲಾಕ್

ಬೆಳಗಾವಿ ಬಂದ್‌, ಬೆಳಗಾವಿ ಚಲೋಗೆ ಪೊಲೀಸರ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕಿ, ದೇಶದ ಪ್ರಧಾನಿ ರಾಜ್ಯಕ್ಕೆ ಬಂದಿದ್ದಾರೆ. ಅದಕ್ಕೆ ಮರ್ಯಾದೆ ಕೊಡೋದು ಪ್ರತಿಯೊಬ್ಬರ ಕರ್ತವ್ಯ. ಕಾಂಗ್ರೆಸ್​ನವರು ಆಗಿರಬಹುದು ಬೇರೆ ಯಾರೋ ಆಗಿರಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಅಂತಾ ಪೊಲೀಸರು ಕ್ರಮ ಕೈಗೊಂಡಿರಬಹುದು. ಎಲ್ಲಾ ಕಡೆ ಬೆಂಕಿ ಹಚ್ಚೋದು ಕಲ್ಲು ಹೊಡೆಯೋದು ನಡೀತಿದೆ. ಅದಕ್ಕೋಸ್ಕರ ಮುಂಜಾಗ್ರತೆ ತೆಗೆದುಕೊಂಡಿರಬಹುದು. ಆದ್ರೆ ಪ್ರತಿಭಟನೆ ಒಂದು ದಿನ ತಡೆಯಬಹುದು ಅಷ್ಟೇ ಎಂದರು.

ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ ಡ್ರಾಮಾ: ಪ್ರತಿ ವರ್ಷ 45 ಸಾವಿರ ಹುದ್ದೆ ಭರ್ತಿ ಆಗ್ತಿತ್ತು. 1 ಲಕ್ಷದ 35 ಸಾವಿರ ಹುದ್ದೆಗಳು ಖಾಲಿ ಇರುವಾಗ ಅವರಿಗೆ ಹೊಳೆದಿದ್ದು ಅಗ್ನಿಪಥ. ಈ ಯೋಜನೆಯಲ್ಲಿ ರಿಟೈರ್‌ಮೆಂಟ್ ಆದವರನ್ನು ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಅಂತಿದ್ದಾರೆ. ಹಾಗಾದರೆ ಇವರ ಮೆಂಟಾಲಿಟಿ ಯಾವ ಮಟ್ಟಕ್ಕಿದೆ? ಅಮಿತ್ ಶಾ ಮಗ ಜಯ್ ಶಾಗೆ ಅಗ್ನಿಪಥ ಕೆಲಸಕ್ಕೆ ಹೋಗೋಕೆ ಹೇಳಿ. ಯಾವ ಮಂತ್ರಿ, ಎಂಎಲ್‌ಎ ಮಕ್ಕಳು ಅಗ್ನಿಪಥ ಕೆಲಸಕ್ಕೆ ಹೋಗ್ತಾರೆ. ಬಡವರ ಮಕ್ಕಳು ಸೇನೆ ಸೇರುತ್ತಾರೆ. 16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ ಡ್ರಾಮಾ ರಿಲೀಸ್ ಮಾಡಿದ್ದಾರೆ. ಪ್ರತಿಯೊಂದರಲ್ಲೂ ಆರ್‌ಎಸ್ಎಸ್ ವಾದ ತರುತ್ತಿದ್ದಾರೆ ಎಂದು ಆರೋಪಿಸಿದರು.

ABOUT THE AUTHOR

...view details