ಕರ್ನಾಟಕ

karnataka

ETV Bharat / state

ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ, ನಾಳೆ ದೆಹಲಿಗೆ ತೆರಳುವೆ: ಸಿಎಂ - ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವಿಚಾರ

ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಾಳೆ ದೆಹಲಿಗೆ ತೆರಳುತ್ತಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದರು.

cm-basavaraj-bommai-reaction-on-delhi-visit
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Apr 28, 2022, 5:02 PM IST

Updated : Apr 28, 2022, 5:24 PM IST

ಬೆಳಗಾವಿ:ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಚೀಫ್ ಜಸ್ಟಿಸ್ ‌ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳಲು ನಾಳೆ ದೆಹಲಿಗೆ ತೆರಳುತ್ತಿದ್ದೇನೆ. ಸಂಪುಟದ ಬಗ್ಗೆ ಚರ್ಚೆಗೆ ಹೈಕಮಾಂಡ್ ಯಾವಾಗ ಕರೆಯುತ್ತದೆಯೋ, ಅಂದು ಹೋಗಿ ಚರ್ಚೆ ಮಾಡುತ್ತೇನೆ. ಬಳಿಕ ಬಂದು ನಿಮಗೆ ಮಾಹಿತಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಬಗ್ಗೆ ಚರ್ಚೆಗೆ ಹೈಕಮಾಂಡ್​ನಿಂದ ಆಹ್ವಾನ ಬಂದಾಗ ದೆಹಲಿಗೆ ಹೋಗುತ್ತೇನೆ ಎಂದರು. ರಾಜ್ಯದಲ್ಲಿ ಮತ್ತೆ ಸಾರಿಗೆ ಮುಷ್ಕರ ವಿಚಾರವನ್ನು ಸಾರಿಗೆ ಸಚಿವರು ನೋಡಿಕೊಳ್ಳುತ್ತಾರೆ. ಬೆಳಗಾವಿ ‌ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹೆಸರು ಇಡುವ ವಿಚಾರ ನಮ್ಮ ಮುಂದಿದೆ. ಇಲ್ಲಿಯ ಎಲ್ಲ ನಾಯಕರ ಜೊತೆಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬೆಳಗಾವಿ ಜಿಲ್ಲೆಯ ವಿಭಜನೆ ಬಗ್ಗೆ ಇನ್ನೂ ಯಾವುದೇ ನಿರ್ಣಯ ಮಾಡಿಲ್ಲ, ಈ ಬಗ್ಗೆ ಅನೇಕ ವರ್ಷಗಳಿಂದ ಚರ್ಚೆ ಇದೆ ಎಂದರು.

ಮಾಧ್ಯಮದವರಿಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಎರಡು, ಮೂರು ಜಿಲ್ಲೆಗಳ ವಿಭಜನೆ ಬಗ್ಗೆ ಪ್ರಸ್ತಾಪ ಇದೆ. ಗಡಿ ಭಾಗದ ಜಿಲ್ಲೆ ಇದಾಗಿದ್ದು, ವಿಭಜನೆ ಬೇಡ ಎಂದು ಜೆ.ಹೆಚ್.ಪಟೇಲ್ ಸಿಎಂ ಇದ್ದಾಗ ಹೇಳಿದ್ದರು. ಈಗ ಮತ್ತೆ ಜನರು ಒತ್ತಾಸೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜಿಲ್ಲೆಗಳ ಹಿತದೃಷ್ಟಿಯಿಂದ ಈ ಬಗ್ಗೆ ‌ನಾವು ನಿರ್ಣಯ ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ:ಸುಡುಬಿಸಿಲಿಗೆ ಉ.ಕರ್ನಾಟಕ ತತ್ತರ: ಮುಂದಿನ 3 ದಿನ ಅಧಿಕ ಉಷ್ಣಾಂಶದ ಎಚ್ಚರಿಕೆ

Last Updated : Apr 28, 2022, 5:24 PM IST

ABOUT THE AUTHOR

...view details