ಅಥಣಿ(ಬೆಳಗಾವಿ): ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಮಕ್ಕಳು ತಾವು ಕೂಡಿಟ್ಟಿರುವ ಹಣವನ್ನು ದೇಣಿಗೆ ನೀಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೂಡಿಟ್ಟ ಹಣ ರಾಮಮಂದಿರಕ್ಕೆ ಸಮರ್ಪಣೆ: ಮಕ್ಕಳ ಕಾರ್ಯಕ್ಕೆ ಪ್ರಶಂಸೆ - ಅಥಣಿ ಸುದ್ದಿ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಅಥಣಿಯಲ್ಲಿ ಮಕ್ಕಳು ತಾವು ಕೂಡಿಟ್ಟ ಹಣ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ರಾಮಮಂದಿರದ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಶೇಗುಣಸಿ ಗ್ರಾಮದ ಯುವ ಕೃಷಿಕ ಶೇಷಾನಂದ ಯಡಹಳ್ಳಿ ಅವರ ಮಕ್ಕಳಾದ ಶಂಕರ ಮತ್ತು ಕಾರ್ತಿಕ ಶೇಷಾನಂದ ಯಡಹಳ್ಳಿ ಹಾಗೂ ಗುರುರಾಜ ಪಾಟೀಲರ ಸುಪುತ್ರಿ ವೈಷ್ಣವಿ ಪಾಟೀಲ ಮತ್ತು ವೈದ್ಯರಾದ ಡಾ. ಕೆ.ಎ. ಪಾಟೀಲರ ಮಕ್ಕಳಾದ ತನುಶ್ರೀ ಮತ್ತು ಸಮರ್ಥ ಕಾಡಗೌಡ ಪಾಟೀಲರು ತಾವು ಸಂಗ್ರಹಿಸಿದ ಚಿಲ್ಲರೆ ಹಣವನ್ನು ಒಟ್ಟುಗೂಡಿಸಿ 1995 ರೂಪಾಯಿಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ಮುದ್ದು ಮಕ್ಕಳ ಈ ಕಾರ್ಯಕ್ಕೆ ಗ್ರಾಮದ ಹಿರಿಯರು ಅಭಿನಂದಿಸಿದ್ದಾರೆ.
ಇದನ್ನೂ ಓದಿ:ಹಿಂದೂ ದೇವತೆಗಳನ್ನ ಅವಮಾನಿಸಿದ ತಾಂಡವ ಚಲನಚಿತ್ರ ನಿಷೇಧಿಸುವಂತೆ ಆಗ್ರಹ