ಚಿಕ್ಕೋಡಿ:ನಾಲ್ಕು ತಿಂಗಳ ಹಿಂದೆ ಬಿಜೆಪಿಯವರು ಮೂರ್ಖರು ಎಂದು ಹೇಳುತ್ತಿದ್ದ ಶ್ರೀಮಂತ ಪಾಟೀಲ್ಗೆ ಟಿಕೆಟ್ ಕೊಡಲು ಬಿಜೆಪಿ ಮುಂದಾಗಿದೆ. ಇದು ನಾಚಿಕೆಗೇಡಿನ ಸಂಗತಿಯಲ್ಲೆವೇ ಎಂದು ಮಾಜಿ ಶಾಸಕ ರಾಜು ಕಾಗೆ ಪ್ರಶ್ನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಶಿವಣಗಿ ಸಮುದಾಯಭವನದಲ್ಲಿ ನಡೆಯುತ್ತಿರುವ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಬೆಂಬಲಿಗರ ಸಭೆಯಲ್ಲಿ ಸ್ವಪಕ್ಷ ಮತ್ತು ಬಿಜೆಪಿ ಹೈಕಮಾಂಡ್ ವಿರುದ್ಧ ತೊಡೆ ತಟ್ಟಿದರು.
ಶಿವಣಗಿ ಸಮುದಾಯಭನದಲ್ಲಿ ನಡೆಯುತ್ತಿರುವ ಬೆಂಬಲಿಗರ ಸಭೆ ಲೋಕಸಭೆ ಚುನಾವಣೆ ವೇಳೆ ಶ್ರೀಮಂತ ಪಾಟೀಲ್ ಮಾಡಿದ್ದ ಭಾಷಣದ ತುಣುಕನ್ನು ರಾಜು ಕಾಗೆ ರಿಲೀಸ್ ಮಾಡಿದ್ರು. ಅದರಲ್ಲಿ ಪ್ರಕಾಶ ಹುಕ್ಕೇರಿ ಅನ್ನು ಬಾರಿ ಅಂತರದಿಂದ ಗೆಲ್ಲಿಸಿಕೊಟ್ಟಂತಾಗಿದೆ ಅಂತಾ ಮಾತಾಡಿದ ಹಾಗೂ ಬಿಜೆಪಿ ಪಕ್ಷದ ನಾಯಕರುಗಳ ಬಗ್ಗೆ ಟೀಕೆ ಮಾಡಿದ್ರು. ಅದರಂತೆ 4 ತಿಂಗಳ ಹಿಂದೆ ಬಿಜೆಪಿಯವರು ಮೂರ್ಖರು ಎಂದು ತೆಗಳುತ್ತಿದ್ದವರಿಗೆ ಈಗ ಪಕ್ಷವೇ ಟಿಕೆಟ್ ನೀಡಲು ಮುಂದಾಗಿದೆ. ಇದು ನಾಚಿಕೆಗೇಡಿನ ಸಂಗತಿಯಲ್ಲವೇ ಎಂದರು.
ಸುಮಾರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದ ಸಭೆಯಲ್ಲಿ ಅನೇಕ ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ರಾಜು ಕಾಗೆ ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇಲ್ಲವೇ ಪಕ್ಷೇತರ ವಾಗಿ ನಿಂತರು ಅವರಿಗೆ ಬೆಂಬಲ ನೀಡಲು ಸದಾ ಸಿದ್ಧ ಎಂದು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.